ಇಂದು ಮುಂಜಾನೆ ಒಂಟಿ ಸಲಗ ಓಡಾಟ!: ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ

ಮುಂಡಾಜೆ: ಮುಂಡಾಜೆಯ ಕಲ್ಲಾಜೆ, ಮುಂಡ್ರುಪ್ಪಾಡಿ, ಧುಂಬೆಟ್ಟು ಮಜಲು ಪರಿಸರದ ಮನೆಗಳ ಸಮೀಪ ಮುಂಜಾವಿನಲ್ಲಿ ಒಂಟಿ ಸಲಗ ಓಡಾಟ ನಡೆಸಿದ್ದು, ಸಿ.ಸಿ. ಕ್ಯಾಮರಾದಲ್ಲಿ ದೃಶ್ಯಾವಳಿ ಪತ್ತೆಯಾಗಿದೆ. ಗ್ರಾಮೀಣರಸ್ತೆಯಲ್ಲಿ ಹಾಗೂ ತೋಟಗಳ ಪರಿಸರದಲ್ಲಿ ಸುಮಾರು 2ಕಿ.ಮೀ. ವ್ಯಾಪ್ತಿಯಲ್ಲಿ ಇಂದು (ಭಾನುವಾರ) ಮುಂಜಾನೆ 4.30ರ ಸುಮಾರಿಗೆ ಒಂಟಿ ಸಲಗ ಸವಾರಿ ನಡೆಸಿದ್ದು, ವಿಡಿಯೋದಲ್ಲಿ ದಾಖಲಾಗಿದೆ.

ಸುಮಾರು 28 ಸೆಕೆಂಡುಗಳ ವಿಡಿಯೋ ಲಭ್ಯವಾಗಿದ್ದು, ಒಂಟಿಸಲಗ ಅಡ್ಡಾಡುತ್ತಿರುವ ದೃಶ್ಯಾವಳಿಗಳು ಲಭಿಸಿವೆ.

error: Content is protected !!