ಬೆಳ್ತಂಗಡಿ: ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಿಂದ ಶ್ರೀ ಸಾಮಾನ್ಯರಿಗಾಗಿ ಉಚಿತವಾಗಿ 40 ದಿನಗಳಕಾಲ ಕಾರ್ಯನಿರ್ವಹಿಸುತ್ತಿದ್ದ ‘ಆಪ್ತರಕ್ಷಕ’ ಎಂಬ ತುರ್ತು ವಾಹನ ಸೇವೆಯ ಸಮಾರೋಪ ಸಮಾರಂಭ ನಡೆಯಿತು.
ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಭಾಗವಹಿಸಿದ್ದರು.
ಕೊರೊನಾ ಮಹಾಮಾರಿಯಿಂದ ಜನ-ಜೀವನ ತತ್ತರಿಸಿದ ಈ ಸಂಕಷ್ಟದ ಕಾಲದಲ್ಲಿ ಸಮಾಜಮುಖೀ ತುಡಿತದೊಂದಿಗೆ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಕೊರೊನಾ ಭಾದಿತ ಜನ ಸಾಮಾನ್ಯ ಆಪ್ತರಕ್ಷಕ ಸೇವೆ ಕಲ್ಪಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಪ್ತರಕ್ಷಕ ಉಚಿತ ವಾಹನದ ವ್ಯವಸ್ಥೆ ಮಾಡಿದ ಉದ್ಯಮಿ ರವಿಚಂದ್ರ ಚಕ್ಕಿತ್ತಾಯ, ಉದ್ಯಮಿ ಜೈಸನ್ ಜೋಯಲ್ ಡಿ’ಸೋಜಾ, ನೋಟರಿ ವಕೀಲರಾದ ಗೋಪಾಲಕೃಷ್ಣ ಗುಲ್ಲೋಡಿ , ಸುರೇಶ್ ಪೆರ್ಲ, ಉಜಿರೆಯ ಉದಯ ಅಚಾರಿ, ಶಶಿಧರ್ ಎಮ್. ಕಲ್ಮಂಜ ಅವರನ್ನು ಸನ್ಮಾನಿಸಲಾಯಿತು. 40 ದಿನದಿಂದ ಆಪ್ತರಕ್ಷಕ ಸೇವೆ ನೀಡಿದ 15 ಮಂದಿ ಸಿಬ್ಬಂದಿಗಳನ್ನು ಗೌರವಿಸಲಾಯಿತು.
‘ಬದುಕು ಕಟ್ಟೋಣ ಬನ್ನಿ ತಂಡ’ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿಯ ಸಮಾಜಮುಖಿ ಕೆಲಸವನ್ನು ಶಾಸಕ ಹರೀಶ್ ಪೂಂಜ ಅಭಿನಂದಿಸುವ ಜೊತೆಗೆ ತಾಲೂಕಿನ 81 ಗ್ರಾಮದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡ್ವೇಟ್ನಾಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ.ಆರ್.ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು, ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್.ಕೆ.ವಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ , ಉದ್ಯಮಿ ರವಿಚಂದ್ರ ಚಕ್ಕಿತ್ತಾಯ, ಉದ್ಯಮಿ ಲಕ್ಷ್ಮಣ ಸಪಲ್ಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಶಿಧರ್.ಎಮ್.ಕಲ್ಮಂಜ, ನೋಟರಿ ವಕೀಲರು ಗೋಪಾಲಕೃಷ್ಣ ಗುಲ್ಲೋಡಿ, ಶ್ರೀಧರ್ ಮರಕ್ಕಡ ಮತ್ತು ಬದುಕು ಕಟ್ಟೋಣ ಬನ್ನಿ ತಂಡ ಸದಸ್ಯರು ಉಪಸ್ಥಿತರಿದ್ದರು.