ಮುಸ್ಲಿಂ ಯುವಕನ ಧ್ವನಿಯಲ್ಲಿ‌ ಮೂಡಿತು ದೇವಿಯ ಗಾಯನ: ಮೆಚ್ಚುಗೆ ಪಟ್ಟವರು ಹಲವರು: ಅಪಸ್ವರ ಎತ್ತಿದರು ಕೆಲವರು

 

ಬೆಳ್ತಂಗಡಿ: ಕಲೆಗೆ ಯಾವುದೇ ಜಾತಿ ಧರ್ಮ ಭಾಷೆ ಅಡ್ಡ ಬರುವುದಿಲ್ಲ.‌ ಕಲಾವಿದನಾಗಲು ಅವನ ಪ್ರಯತ್ನ ಹಾಗೂ ಸಾಧನೆಯಿಂದ ಮಾತ್ರ ಸಾಧ್ಯವಾಗಬಹುದು. ಅದಕ್ಕೆ ಉದಾಹರಣೆ ಬೆಳ್ತಂಗಡಿ ತಾಲೂಕು ಸವಣಾಲ್ ಗ್ರಾಮದ ಮಂಜದ ಬೆಟ್ಟು ನಿವಾಸಿ ರಮ್ಲನ್ ಎಂಬ ಕಡುಬಡವನಾದ ಮುಸ್ಲಿಂ ಯುವಕ ಚಿಕ್ಕಂದಿನಿಂದಲೇ ಏನಾದರೊಂದು ಸಾಧನೆಗಳನ್ನು‌ಮಾಡಿಕೊಂಡು ಬಂದವನೇ ವಿದ್ಯೆ ತಲೆಗೆ ಹತ್ತದಿದ್ದರೂ ಒಳ್ಳೊಳ್ಳೆಯ ಯೋಚನೆಗಳ ಮೂಲಕ ಹಾಗೂ ಎಲ್ಲ ಸಮುದಾಯದವರನ್ನೂ ಪ್ರೀತಿಯಿಂದ ಮಾತನಾಡಿಸುವ ಈತ ಎಲ್ಲರಿಗೂ ಚಿರಪರಿಚಿನಾಗಿದ್ದನೆ.

ವೃತ್ತಿಯಲ್ಲಿ ಟಿವಿ ಟೆಕ್ನಿಷಿಯನ್ ಆಗಿರುವ ಇತ ಹವ್ಯಾಸಿ ಹಾಡುಗಾರ ಯಾವುದೇ ಸಂಗೀತ ಕ್ಲಾಸ್ ಗಳಿಗೆ ಹೋಗದೆ ತನ್ನ ಪ್ರಯತ್ನ ದಿಂದಲೇ ಕೆಲವು ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಜನ ಮೆಚ್ಚುಗೆಯನ್ನು ಪಡೆದುಕೊಂಡ ರಮ್ಲನ್ ಇದೀಗ ತನ್ಮ ಮನೆಯ ಹತ್ತಿರದ ದೇವಿ ದೇವಸ್ಥಾನದ ಹಾಡೊಂದನ್ನು ರಚಿಸಿ ಸ್ವತಃ ಹಾಡಿ ಭಾರೀ ಜನ ಮೆಚ್ಚುಗೆ ಪಡೆದಿದ್ದಾನೆ. ಇವನ ಹಾಡನ್ನು ಮೆಚ್ಚಿದ ಎಲ್ಲರೂ ಅವನಿಗೆ ಶುಭಾಶಯಗಳನ್ನು ಹೇಳುತಿದ್ದಾರೆ. ಅದರೆ ಅವನ ಸಮುದಾಯದ ಕೆಲವೊಂದು ಜನರು ಇವನು ಹಾಡಿದ ಹಾಡಿನ ಬಗ್ಗೆ ಅಪಸ್ವರ ಎತ್ತಿದ್ದು ಇದು ಅವನಿಗೆ ತುಂಬಾ ನೋವನ್ನುಂಟು ಮಾಡಿದೆ.

ಈ ಬಗ್ಗೆ ಪ್ರಜಾಪ್ರಕಾಶ ಗೆ ಪ್ರತಿಕ್ರಿಯಿಸಿದ ಅವನು ಕಲಾವಿದನಿಗೆ ಧರ್ಮ ಇಲ್ಲ ಎಲ್ಲಾ ಧರ್ಮವನ್ನು ಪ್ರೀತಿಸಬೇಕು ಎಂಬ ಮಾತು ಕುರಾನ್ ನಲ್ಲಿ ಇದೆ ಅದ್ದರಿಂದ ನಾನು ದೇವಿಯ ಹಾಡನ್ನು ಭಕ್ತಿಯಿಂದ ಹಾಡಿದ್ದೇನೆ ತುಂಬಾ ಮಂದಿ ನಾನು ರಚಿಸಿ ಹಾಡಿದ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನನಗೆ ಅತೀವ ಸಂತೋಷವನ್ನುಂಟುಮಾಡಿದೆ. ಅದರೆ ಕೆಲವರು ನನ್ನ ಸಮುದಾಯದವರೇ ನನಗೆ ನೋವಾಗುವ ರೀತಿಯಲ್ಲಿ ಮಾತನಾಡುತಿದ್ದಾರೆ. ಅವರಿಗೆ ನಾನು ಈ ಮೂಲಕ ಸ್ಪಷ್ಟ ಪಡಿಸುತ್ತಿರುವುದೇನೆಂದರೆ ನನ್ನನ್ನು ಕಲಾವಿದನಾಗಿ ನೋಡಿ ಧರ್ಮಕ್ಕೆ ಸೀಮಿತ ಗೊಳಿಸಬೇಡಿ ಒಂದು ಧರ್ಮದ ಹಾಡು ರಚಿಸಿ ಹಾಡಿದ ಕೂಡಲೇ ನಾನು ನನ್ನ ಧರ್ಮವನ್ನು ತಿರಸ್ಕರಿಸುತ್ತೆನೆಂದು ಅಲ್ಲ ನಾನು ಯಾವತ್ತಿದ್ದರೂ ಮುಸಲ್ಮಾನನೇ ಅದರೆ ಕಲಾವಿದನಾಗಿ ನನ್ನಲ್ಲಿ ಧರ್ಮ ಇಲ್ಲ ನನ್ನನ್ನು ಎಲ್ಲ ಧರ್ಮದವರೂ ಪ್ರೀತಿಸುತ್ತಾರೆ ನನ್ನ ಹಾಡನ್ನು ಎಲ್ಲರೂ ಇಷ್ಟ ಪಡುತ್ತಾರೆ ಮಸ್ಲಿಂ ಕೊಂಕಣಿ ಹಾಡನ್ನೂ ಹಾಡಿದ್ದೇನೆ. ಅದ್ದರಿಂದ ದಯವಿಟ್ಟು ನನಗೆ ಈ ರೀತಿ ನೋವು ಮಾಡ ಬೇಡಿ ಎಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ನೋವನ್ನು ಹಂಚಿಕೊಂಡರು.

ಕಲಾವಿದನನ್ನು ಧರ್ಮಕ್ಕೆ ಸೀಮಿತಗೊಳಿಸಬೇಡಿ

ಕಲಾವಿದನಾದವನಿಗೆ ಜಾತಿ ಧರ್ಮ ಯಾವತ್ತೂ ಅಡ್ಡ ಬರುವುದಿಲ್ಲ ಅದ್ದರಿಂದ ಎಲ್ಲರಲ್ಲೂ ಈ ಮೂಲಕ ಮನವಿ ಇಷ್ಟೆ ಕಲಾವಿದನಾಗಲು ಅದೆಷ್ಟು ಶ್ರಮ ಪಡಬೇಕಾಗುತ್ತದೆ. ಕೊನೆಗೆ ಅವನು ಪಟ್ಟ ಶ್ರಮಕ್ಕೆ ಫಲ ಸಿಗುತ್ತದೆ.

ಇವತ್ತು ರಮ್ಲನ್ ಹಾಡು ಎಲ್ಲರ ಮೊಬೈಲ್ ನಲ್ಲಿ ರಿಂಗಣಿಸುತ್ತಿದೆ ಅದು ನಮಗೆ ಹೆಮ್ಮೆಯಲ್ಲವೆ ನಮ್ಮೂರಿನ ಪ್ರತಿಭೆಯ ಹಾಡು ಅದೆಷ್ಟೋ ಸಾವಿರ ಜನರ ಬಾಯಿಯಲ್ಲಿ ಅದನ್ನು ಬಿಟ್ಟು ಅವನು ಹಾಡಿದ ಹಾಡು ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಗೊಳಿಸಿ ಅವನ ಪ್ರತಿಭೆಯನ್ನು ಚಿವುಟುವ ಕೆಲಸವನ್ನು ಮಾಡಬೇಡಿ ಆ ಬಡ ಕಲಾವಿದನಿಗೆ ಪ್ರೋತ್ಸಾಹಿಸಿ ದೊಡ್ಡ ಕಲಾವಿದನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ದಯವಿಟ್ಟು ಅವನಿಗೆ ನೋವು ಕೊಟ್ಟು ಅವನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗಾಯನವನ್ನು ನಿಲ್ಲಿಸಬೇಡಿ ಅದು ಅವನ ಬಾಯಿಯಿಂದ ನಿರಂತರ ಹರಿಯುತ್ತ ಗ್ರಾಮೀಣ ಪ್ರದೇಶದ ಪ್ರತಿಭೆ ಇಡೀ ವಿಶ್ವದಲ್ಲಿ ಹೆಸರು ಗಳಿಸಲಿ ಎಂದು ಹಾರೈಸುವ.

error: Content is protected !!