ಕೋಡಿಹಳ್ಳಿ ಬಂಧನ ಸಿಪಿಐ(ಎಂ) ಖಂಡನೆ: ಸಾರಿಗೆ ಸಂಸ್ಥೆ ಮುಳುಗುತ್ತಿರುವ ಹಡಗು ಆಗಲು ರಾಜ್ಯ ಸರ್ಕಾರದ ಬೇಜಾಬ್ದಾರಿ, ವೈಪಲ್ಯ ಕಾರಣ

ಬೆಳ್ತಂಗಡಿ: ಸಾರಿಗೆ ಮುಷ್ಕರ ನಿಷೇಧ ಮಾಡಿ ತನ್ನ ದಮನಕಾರಿ ಧೋರಣೆಯನ್ನು ಮುಂದುವರಿಸಿರುವ ರಾಜ್ಯ ಬಿಜೆಪಿ ಸರ್ಕಾರ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸುವ ಮೂಲಕ ತನ್ನ ಪ್ರಜಾಪ್ರಭುತ್ವ ವಿರೋಧಿ ನಿಲುಮೆಯನ್ನು ಪ್ರಕಟಿಸಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಬೆಳ್ತಂಗಡಿ ತಾಲೂಕು ಸಮಿತಿ ಖಂಡಿಸಿದೆ. ಬಂಧಿತ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಇತರರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

ನೌಕರರ ಪ್ರತಿನಿಧಿಗಳೊಂದಿಗೆ ಮಾತುಕತೆಯ ಸೌಹಾರ್ದ ಪರಿಹಾರ ಮಾಡಬೇಕಾದ ರಾಜ್ಯ ಬಿಜೆಪಿ ಸರ್ಕಾರ ಮುಷ್ಕರ ನಿಷೇಧ, ಎಸ್ಮಾ ಜಾರಿ , ಅಮಾನತು , ವಸತಿ ಗೃಹಗಳ ತೆರವು, ಖಾಸಗಿ ಬಸ್ಸುಗಳ ಓಡಾಟ ಬೆದರಿಕೆಗಳನ್ನು ಒಡ್ಡುವ ಮೂಲಕ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ನೌಕರ ವಿರೋಧಿ ಮನೋಭಾವನೆ ಖಾಸಗೀಕರಣದ ಹುನ್ನಾರವು ಮುಷ್ಕರದ ಸೌಹಾದ೯ ಪರಿಹಾರವನ್ನು ತಡೆಯುತ್ತಿವೆ. ಇದರಿಂದಾಗಿ ರಾಜ್ಯದ ಜನತೆ ಸಾರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಳುಗುತ್ತಿರುವ ಹಡಗು ಆಗಲು ರಾಜ್ಯ ಸರ್ಕಾರದ ಬೇಜಾಬ್ದಾರಿ, ವೈಪಲ್ಯ ಕಾರಣ ರಾಜ್ಯ ಬಿಜೆಪಿ ಸರ್ಕಾರವು ಜನತೆಯನ್ನು ನೌಕರರು ಮತ್ತು ಸಾರ್ವಜನಿಕ ಸಾರಿಗೆ ವಿರುದ್ಧ ಎತ್ತಿ ಕಟ್ಟಿ ತನ್ನ ದುರಾಡಳಿತವನ್ನು ಮರೆಮಾಚುವ ರಾಜಕೀಯದ ಭಾಗವಾಗಿ ಸಚಿವರುಗಳು ಬೇಜಾವ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಕರ್ನಾಟಕ ಸಾರಿಗೆ ಸಂಸ್ಥೆ ಮುಳುಗುತ್ತಿರುವ ಹಡಗು ಎಂದು ಹೇಳಿಕೆ ನೀಡುವ ಮೂಲಕ ರಾಜ್ಯ ಸರ್ಕಾರದ ವೈಫಲ್ಯವನ್ನು ಬಹಿರಂಗ ಪಡಿಸಿದ್ದಾರೆ. ಸಾರಿಗೆ ಸಂಸ್ಥೆಯು ಮುಳುಗುತ್ತಿರುವ ಹಡಗು ಆಗಲು ರಾಜ್ಯ ಸರ್ಕಾರದ ಬೇಜಾವ್ದಾರಿ , ವೈಫಲ್ಯ ಕಾರಣ ಎಂದಿರುವ ಸಿಪಿಐ(ಎಂ) , ಸಾರಿಗೆ ಸಂಸ್ಥೆ ಮುಳುಗಲು ರಾಜ್ಯ ಸರ್ಕಾರ ಕಾರಣ. ಮುಳುಗುತ್ತಿರುವ ಹಡಗು ಏಷ್ಯಾ ಖಂಡದ ಲಾಭದಾಯಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದುದು ಹೇಗೆ ಎಂದು ಪ್ರಶ್ನಿಸಿರುವ ಸಿಪಿಐ(ಎಂ) , ರಾಜ್ಯದ ಜನತೆ ಸಾರಿಗೆ ನೌಕರರು ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳ ಬಗ್ಗೆ ಅರಿತು ನೌಕರರೊಂದಿಗೆ ಬೆಂಬಲವಾಗಿ ನಿಲ್ಲಬೇಕೆಂದು ಸಿಪಿಐ(ಎಂ) ಮನವಿ ಮಾಡುತ್ತದೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಹೇಳಿದ್ದಾರೆ.

error: Content is protected !!