ಬೆಳ್ತಂಗಡಿ: ದಾರಿಯಲ್ಲಿ ಸಿಕ್ಕಿದ ಚಿನ್ನದ ಸರವನ್ನು ವಾರೀಸುದಾರರಿಗೆ ಚಿನ್ನದ ಅಂಗಡಿಯವರ ಮೂಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದೆ ಯುವಕನ ಬಗ್ಗೆ ಮೆಚ್ಚುಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹುಣ್ಸೆಕಟ್ಟೆಯ ವೃತ್ತಿಯಲ್ಲಿ ಹಿಟಾಚಿ ಅಪರೇಟರ್ ಆಗಿ ಕೆಲಸ ಮಾಡುತ್ತಿರುವ ಪ್ರಭಾಕರ ಎಂಬ ಯುವಕ ನಿನ್ನೆ ಸಂತೆಕಟ್ಟೆಯ ಸಮೀಪದ ಹೊಟೇಲ್ ಒಂದರ ಎದುರು ಬೈಕ್ ನಿಲ್ಲಿಸುವಾಗ ಪರ್ಸ್ ಒಂದು ಸಿಕ್ಕಿತ್ತು ಅದನ್ನು ತೆರೆದು ನೋಡುವಾಗ ಸುಮಾರು 2 ಪವನ್ ನ ರೂ 80.000ಕ್ಕಿಂತಲೂ ಅಧಿಕ ಬೆಲೆಯ ನೆಕ್ಲೇಸ್ ಸರವೊಂದು ಇತ್ತು ಇದನ್ನು ಪರಿಶೀಲಿಸಿದಾಗ ಅದರಲ್ಲಿ ಸ್ಥಳೀಯ ಆಭರಣ ಮಳಿಗೆಯಿಂದ ಖರೀದಿಸಿದ ಬಿಲ್ಲ್ ಕಂಡು ತಕ್ಷಣ ಆ ಬಂಗಾರದ ಮಳಿಗೆಗೆ ಹೋಗಿ ಈ ಬಗ್ಗೆ ವಿಚಾರಿಸಿದಾಗ ನೆರಿಯದ ಶರೀಫ್ ಎಂಬವರು ಖರೀದಿಸಿದ ಚಿನ್ನದ ಸರ ಅದಾಗಿತ್ತು ಈ ಬಗ್ಗೆ ಅವರಿಗೆ ಮಾಹಿತಿ ನೀಡಿದಾಗ ಅವರು ಈ ದಿನ ಬಂದು ಸರವನ್ನು ಪಡೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಮುಸ್ಲಿಂ ವ್ಯಕ್ತಿಗೆ ಸೇರಿದ ಬಂಗಾರದ ನೆಕ್ಲೇಸ್ ಸರವನ್ನು ಹಿಂದೂ ಯುವಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.