ಕಾಲೇಜ್ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ: ಕಾಲೇಜು ವಿಧ್ಯಾರ್ಥಿನಿಯೊಬ್ಬಳು ಚೂಡಿದಾರದ ಶಾಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೇಣೂರು ಸಮೀಪದ ಕತ್ತೋಡಿಬೈಲು ನಿವಾಸಿ ವಿಠಲ ಆಚಾರ್ಯ ಅವರ ಪುತ್ರಿ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿ ಸೌಮ್ಯಾ (19ವ.) ಎಂಬ ವಿಧ್ಯಾರ್ಥಿನಿ ನೇಣು ಬಿಗಿದು ಶುಕ್ರವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ

ಪದವಿ ಓದುತ್ತಿದ್ದ ಈಕೆ ಕೋವಿಡ್ ನಿಯಮಾವಳಿಯ ರಜಾ ಅವಧಿ ಮುಗಿದ ಬಳಿಕವೂ ತರಗತಿಗೆ ಹಾಜರಾಗದೆ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ಬೆಳಿಗ್ಗೆ ಎಂದಿನಂತೆ ಮನೆಯಲ್ಲಿ ಉಪಹಾರ ಮುಗಿಸಿದ ನಂತರ ಕಾಣೆಯಾಗಿದ್ದರು . ಮನೆಯವರು ಹುಡುಕಾಡಿದಾಗ ಆಕೆ ಮನೆಯ ಮೇಲ್ಛಾವಣಿಯಲ್ಲಿ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದು ಕೃತ್ಯವೆಸಗಿಕೊಂಡಿರುವುದು ಕಂಡುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: Content is protected !!