ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ: ಬೆಳ್ತಂಗಡಿ ಮೂಲದ ಡಾ. ವೃಂದಾ ಬೇಡೇಕರ್ ಅವರಿಗೆ‌ ಸನ್ಮಾನ

ಬೆಳ್ತಂಗಡಿ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆರೋಗ್ಯ ವಿಜ್ಞಾನಗಳ ಶ್ರೇಷ್ಠ ವೈದ್ಯ ಲೇಖಕರಲ್ಲಿ ಓರ್ವರಾಗಿರುವ ಬೆಳ್ತಂಗಡಿ ಮೂಲದ ಡಾ. ವೃಂದಾ ಬೇಡೇಕರ್ ಅವರನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಇದರ ವತಿಯಿಂದ ನ. 5 ರಂದು ಬೆಂಗಳೂರಿನ ಧನ್ವಂತರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಶಿಕ್ಷಣ ಸಚಿವ ಮತ್ತು ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ಕೆ. ಸುಧಾಕರ್ ಅವರು ಸಮ್ಮಾನಿಸಿದರು.
ಈ ಸಂದರ್ಭ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ವಿವಿಯ ಕುಲಪತಿ ಡಾ. ಎಸ್. ಸಚ್ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು. ಡಾ. ವೃಂದಾ ಅವರು ಶಿಶಿಲ ಗ್ರಾಮದವರಾಗಿದ್ದು ಯೋಗೇಶ್ ಬೇಡೇಕರ್ ಅವರ ಪತ್ನಿಯಾಗಿದ್ದಾರೆ. ಪ್ರಸ್ತುತ ಅವರು ಮೂಡುಬಿದರೆಯ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಚಿಕಿತ್ಸಾ ವಿಭಾಗದ ಪ್ರೋಫೆಸರ್ ಹಾಗು ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಇದುವೇ ಜೀವನ’ ಇವರ ಪ್ರಮುಖ ಕೃತಿಯಾಗಿದೆ.

error: Content is protected !!