ಬೆಳ್ತಂಗಡಿ: ಸಂವಿಧಾನ 347ನೇ ವಿಧಿ ಅನ್ವಯ ತುಳು ಭಾಷೆ ಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಮನವಿ ಮಾಡಲಾಯಿತು. ಅದಲ್ಲದೆ ಕೇಂದ್ರದ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಬಗ್ಗೆಯೂ ಶಾಸಕರ ಗಮನಕ್ಕೆ ತರಲಾಯಿತು.
ಮನವಿಗೆ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗಾಗಿ ತುಳು ಲಿಪಿ ಕಲಿಕಾ ತರಬೇತಿಗೆ ಚಾಲನೆ ನೀಡುವ ಮೂಲಕ ತುಳು ಲಿಪಿಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸರ್ವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಅದಲ್ಲದೆ ನಿಮ್ಮ ಜೊತೆ ಪೂರ್ಣ ಬೆಂಬಲ ಹಾಗೂ ತುಳು ಪರವಾಗಿ ಒಟ್ಟಿಗೆ ಇದ್ದೇವೆ ಎಂದರು.
ಬೆಳ್ತಂಗಡಿ ಶಾಸಕರ ಕಚೇರಿಯ ನಾಮ ಪಲಕವನ್ನು ತುಳುಲಿಪಿಯಲ್ಲಿ ಅಳಡಿಸಿದ್ದಕ್ಕಾಗಿ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ತುಳು ಅಕಾಡಮಿ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಶಶಿ ರೈ ಬಂಡಿಮಾರ್ ಜೈ ತುಳುನಾಡ್, ಅಧ್ಯಕ್ಷ ಸುದರ್ಶನ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಪುತ್ತೂರು ಯುವ ಮೋರ್ಚಾ ಕಾರ್ಯದರ್ಶಿ ಆದೇಶ್ ಶೆಟ್ಟಿ, ಜೈ ತುಳುನಾಡು ಸದಸ್ಯರಾದ ಪೃಥ್ವಿರಾಜ್, ಅಶ್ವಿನ್, ನಿಶ್ಚಿತ್ ಜೊತೆಗಿದ್ದರು.