
ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಹಾಗು ಪೋಷಕರುಗಳು ಕಾತರದಿಂದ ನಿರೀಕ್ಷಿಸುತ್ತಿರುವ 10ನೇ ತರಗತಿ ಪರೀಕ್ಷೆ – 1ರ ಫಲಿತಾಂಶ ಇಂದು ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶದ ವಿವರಗಳನ್ನು ಘೋಷಣೆ ಮಾಡಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಮೊದಲ ಬಾರಿಗೆ ಡಿಜಿ ಲಾಕರ್ನಲ್ಲಿ ಅಂಕಪಟ್ಟಿಯಲ್ಲಿ ಲಭ್ಯವಾಗಲಿವೆ. ಈ ಬಾರಿ 7,24,794 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ ಶೇ.94.01ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ 80.04ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಈ ಬಾರಿ ಶೇ.14ರಷ್ಟು ಫಲಿತಾಂಶ ಪ್ರಮಾಣ ಹೆಚ್ಚಳವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬಾಲಕಿಯರದ್ದೇ ಮೇಲುಗೈ: ಈ ಬಾರಿಯೂ ಬಾಲಕಿಯರೇ ಮೇಲುಗೈ (ಶೇ.96) ಸಾಧಿಸಿದ್ಧಾರೆ. ದಕ್ಷಿಣ ಕನ್ನಡ ಟಾಪ್ (98.40), ಕಲಬುರಗಿ ಕೊನೆಯ (85.06) ಸ್ಥಾನ ಪಡೆದಿದೆ. ಏಳು ವಿದ್ಯಾರ್ಥಿಗಳು 625ಕ್ಕೆ 625ಕ್ಕೆ ಅಂಕ ಪಡೆದಿದ್ಧಾರೆ ಎಂದು ಸಚಿವರು ಮಾಹಿತಿ ತಿಳಿಸಿದರು.