ವಿಜಯನಗರ: ದಾಳಿಂಬೆ ತುಂಬಿದ್ದ ಲಾರಿಯೊಂದು ಅತಿವೇಗವಾಗಿ ಬಂದು ಬೊಲೆರೊಗೆ ಹಿಂದಿನಿಂದ ಡಿಕ್ಕಿ ಹೊಡೆದು ಡಿವೈಡರ್‌ಗೆ ಗುದ್ದಿದ ಘಟನೆ ಮರಿಯಮ್ಮನಹಳ್ಳಿ ಹತ್ತಿರದ ಹೆದ್ದಾರಿ -50ರ ತಿಮ್ಮಲಾಪುರ ಟೋಲ್‌ನಲ್ಲಿ ಬುಧವಾರ ಸಂಜೆ ನಡೆದಿದೆ.
ಆಲಮಟ್ಟಿಯಿಂದ ಮೈಸೂರಿಗೆ ದಾಳಿಂಬೆ ತುಂಬಿ ತೆರಳುತ್ತಿದ್ದ ಲಾರಿ ಟೋಲ್‌ನಲ್ಲಿ ಅತಿವೇಗವಾಗಿ ಬಂದು, ಮೊದಲು ಟೋಲ್‌ನಲ್ಲಿ ಹಣ ಪಾವತಿಸುತ್ತಿದ್ದ ಬೊಲೆರೊಗೆ ಡಿಕ್ಕಿ ಹೊಡೆದು, ನಂತರ ಟೋಲ್ ರೂಮ್ ಪಕ್ಕದ ಡಿವೈಡರ್‌ಗೆ ಗುದ್ದಿದೆ. ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಲಾರಿ ಕ್ಲೀನರ್ ತೀವ್ರ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೊ ಪಲ್ಟಿಯಾಗಿದ್ದು, ಇದರೊಳಗಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.