ಬೆಳ್ತಂಗಡಿ: ಧರ್ಮಸ್ಥಳ-ಮಂಗಳೂರು ವೇಗದೂತ ಬಸ್ಸಿನ ಬೇಡಿಕೆ: ರಾಜ್ಯ ಸಾರಿಗೆ ಅಧಿಕಾರಿಗಳಿಗೆ ಎಸ್‌ಡಿಪಿಐ ಬೆಳ್ತಂಗಡಿ ನಿಯೋಗ ಮನವಿ

ಬೆಳ್ತಂಗಡಿ: ಧರ್ಮಸ್ಥಳ-ಮಂಗಳೂರು ವೇಗದೂತ ಬಸ್ಸಿನ ಬೇಡಿಕೆಗಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ನಿಯೋಗ ಡಿ.18ರಂದು ರಾಜ್ಯ ಸಾರಿಗೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ದಿನಂಪ್ರತಿ ಧರ್ಮಸ್ಥಳದಿಂದ ಮಂಗಳೂರು ಉದ್ಯೋಗಕ್ಕೆ ಹೋಗುವ ಪ್ರಯಾಣಿಕರಿಗೆ ಕಡಿಮೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯವಿರುವುದರಿಂದ ಅನಾನುಕೂಲವಾಗಿದ್ದು, ಇದನ್ನು ನಿವಾರಿಸಲು ಧರ್ಮಸ್ಥಳದಿಂದ ಬಿ.ಸಿ ರೋಡ್ – ಮಂಗಳೂರು ಮಾತ್ರ ನಿಲುಗಡೆ ಇರುವ ವೇಗದೂತ ಬಸ್ಸುಗಳನ್ನು ಪ್ರಾರಂಭಿಸಿ, ಸುಮಾರು ವರ್ಷಗಳಿಂದ ಇರುವ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ ಬಸ್ ಸೌಲಭ್ಯ ಕಲ್ಪಿಸಿ ನೆರವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ಮಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಹೆಚ್ಚುವರಿ ವೇಗದೂತ ಬಸ್ ಹಾಗೂ ರಾಜಹಂಸ ಬಸ್ ಹಾಕಿ ಆದಷ್ಟು ಬೇಗ ಪ್ರಯಾಣಿಕರ ಬಸ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ನಿಯೋಗದ ಎಸ್‌ಡಿಪಿಐ ಜಿಲ್ಲಾ ನಾಯಕರಾದ ನವಾಝ್ ಕಟ್ಟೆ, ಹನೀಫ್ ಪುಂಜಾಲಕಟ್ಟೆ, ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಉಜಿರೆ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಆಲಿ, ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ಧಿಕ್ ಯು.ಪಿ, ಕ್ಷೇತ್ರ ನಾಯಕರಾದ ಅಶ್ರಫ್ ಚಾರ್ಮಾಡಿ, ಸಹಲ್ ನಿರ್ಸಾಲ್, ಮರ್ಷದ್ ಉಜಿರೆ ಉಪಸ್ಥಿತರಿದ್ದರು.

error: Content is protected !!