ಬೆಳ್ತಂಗಡಿ: ಬಹುಮಹಡಿ ಕಟ್ಟಡಕ್ಕೆ ಚರಂಡಿಯ ದಿಗ್ಬಂಧನ: ದಿನ 10 ಕಳೆದರೂ ಕ್ರಮ ಕೈಗೊಳ್ಳದ ಕಟ್ಟಡ ಮಾಲೀಕರು: ಬಾಡಿಗೆದಾರರಿಗೆ ನಿತ್ಯ ಕಿರಿ,ಕಿರಿ: ಸಾರ್ವಜನಿಕರ ಅಸಮಾಧಾನ

 

 

ಬೆಳ್ತಂಗಡಿ: ತಾಲೂಕಿನ ಮಧ್ಯಭಾಗದಲ್ಲಿರುವ. ತಾಲೂಕು ಮಿನಿ ವಿಧಾನ ಸೌಧ , ಪಟ್ಟಣ ಪಂಚಾಯತ್ ಬಳಿ ಇರುವ ಎತ್ತರದ ಖಾಸಗಿ ಬಹು ಮಹಡಿ ಕಟ್ಟಡದ ಬಳಿಯ ಸಾರ್ವಜನಿಕ ಚರಂಡಿಯನ್ನು ಪಟ್ಟಣ ಪಂಚಾಯತ್ ಕಳೆದ ಹತ್ತು ದಿನಗಳ ಹಿಂದೆ ಸ್ವಚ್ಛ ಗೊಳಿಸಿತ್ತು, ಅದರೆ ಅದರ ಪಕ್ಕದಲ್ಲೇ ಇರುವ ಕಟ್ಟಡಕ್ಕೆ ಹೋಗಲು ಸಮರ್ಪಕ ವ್ಯವಸ್ಥೆಯನ್ನು ಮಾಡದ ಕಟ್ಟಡ ಮಾಲಕರ ವಿರುದ್ಧ ಬಾಡಿಗೆದಾರರು, ಹಾಗೂ ಸಾರ್ವಜನಿಕರು ಅಸಾಮಾಧಾನ ಹೊರಹಾಕುತಿದ್ದಾರೆ.
ಬಹು ಮಹಡಿ ಕಟ್ಟಡ ಕಟ್ಟುವ ಸಂದರ್ಭ ಕಟ್ಟಡದ ಸುತ್ತ ಮಳೆ ನೀರು ಹರಿಯಲು ಸಮರ್ಪಕ ಚರಂಡಿ , ಹಾಗೂ ಕಟ್ಟಡದ ತ್ಯಾಜ್ಯ ವಿಲೇವಾರಿ ಗುಂಡಿಗಳನ್ನು ಮಾಡಬೇಕಾಗಿರುವುದು ಕಡ್ಡಾಯವಾಗಿದೆ. ಅದರೆ ಈ ಕಟ್ಟಡದಲ್ಲಿ ಅಂತಹ ಯಾವುದೇ ವ್ಯವಸ್ಥೆಗಳನ್ನು ಮಾಡದೇ ಇದ್ದ ಸಾರ್ವಜನಿಕ ಚರಂಡಿಯನ್ನು ಮುಚ್ಚಿ ಅದರಲ್ಲಿ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ದೂರು ಹಲವಾರೂ ಸಮಯಗಳಿಂದ ಕೇಳಿ ಬರುತ್ತಿದೆಯಲ್ಲದೆ, ರಾತ್ರಿ ಹೊತ್ತು ಕಟ್ಟಡದ ತ್ಯಾಜ್ಯ ನೀರನ್ನು ಇದೇ ಚರಂಡಿಗೆ ಹರಿಯ ಬಿಡುವುದರಿಂದ ಪರಿಸರ ದುರ್ನಾತ ಬೀರುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯತ್ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿದೆ. ಅದರೆ ಸಂಬಂಧಪಟ್ಟ ಕಟ್ಟಡ ಮಾಲಕರು ಮಾತ್ರ ತೆರೆದ ಚರಂಡಿಯನ್ನು ಹಾಗೆಯೇ ಬಿಟ್ಟಿದ್ದಾರೆ.‌ಈ ಕಾಂಪ್ಲೆಕ್ಸ್ ನಲ್ಲಿ ವಕೀಲರು ರೆವಿನ್ಯೂ ಇನ್ಸ್‌ಪೆಕ್ಟರ್ ಕಛೇರಿ, ಸೊಸೈಟಿಗಳು, ಸೇರಿದಂತೆ ಹಲವಾರು ಆಫೀಸ್ ಗಳು ಇರುವುದರಿಂದ ದಿನಂಪ್ರತಿ ನೂರಾರು ಸಾರ್ವಜನಿಕರು ತಮ್ಮ ವ್ಯವಹಾರಕ್ಕಾಗಿ ಈ ಕಾಂಪ್ಲೆಕ್ಸ್ ಗೆ ಬರುತ್ತಾರೆ.ಅದರೆ ಅವರಿಗೆ ಈಗ ಬರಲು ತೊಂದರೆಯುಂಟಾಗಿದೆ.ವಯಸ್ಸಾದವರಿಗಂತೂ ಇದನ್ನು ದಾಟಿ ಬರಲು ಸಾಧ್ಯವೇ ಇಲ್ಲದಂತಾಗಿದೆ. ಈ ಬಗ್ಗೆ ಕಾಂಪ್ಲೆಕ್ಸ್ ನ ಬಾಡಿಗೆದಾರರು, ಸಾರ್ವಜನಿಕರು ಅಸಾಮಾಧಾನ ಹೊರಹಾಕುತಿದ್ದಾರೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆಯೂ ಅಗ್ರಹಿಸಿದ್ದಾರೆ.

 

 

error: Content is protected !!