ಹಾವೇರಿ : ಡಾಂಬರ್ ಕಾಯಿಸಲು ಬಳಸುವ ಎಲ್‌ಡಿಒ ಆಯಿಲ್ ಟ್ಯಾಂಕ್‌ನಲ್ಲಿ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.
ಅಭಿಷೇಕ ಗೌಡಗೇರಿ (20) ಎಂಬವರು ಆಯಿಲ್ ಟ್ಯಾಂಕ್‌ನ ವಾಲ್‌ನಲ್ಲಿ ಕಸ ಸಿಲುಕಿದ್ದರಿಂದ ಅದನ್ನ ತೆಗೆಯಲು ಮುಂದಾಗಿದ್ದರು. ಈ ವೇಳೆ ಎರಡು ಕಾಲುಗಳನ್ನ ಟ್ಯಾಂಕ್ ಒಳಗೆ ಬಿಟ್ಟಿದ್ದು, ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.
ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತನಿಖೆ ಕೈಗೊಂಡಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.