ಸಾಂದರ್ಭಿಕ ಚಿತ್ರ
ಕೊಳ್ಳೇಗಾಲ: ಚಿರತೆ, ಹುಲಿಯಂತ ಪ್ರಾಣಿಗಳನ್ನು ಕಂಡರೆ ಜನ ಓಡಿ ಹೋಗಿ ತಮ್ಮ ಪ್ರಾಣ ಕಾಪಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕುರಿಗಾಹಿ ಚಿರತೆಯನ್ನೇ ಬೆನ್ನಟ್ಟಿ ತನ್ನ ಕುರಿಯನ್ನು ಚಿರತೆಯ ಬಾಯಿಯಿಂದ ಕಾಪಾಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದ ಮುದುಮಲೆಯ ಗುಡ್ಡದ ಸಮೀಪ ನಡೆದಿರುವ ಇದು. ಕುರಿ ಮಂದೆಯೊAದರ ಮೇಲೆ ದಾಳಿ ನಡೆಸಿದ ಚಿರತೆ ಕುರಿಯೊಂದನ್ನು ಹೊತ್ತೊಯ್ಯುತ್ತಿತ್ತು. ಇದನ್ನು ಗಮನಿಸಿದ ಕುರಿಗಾಹಿ ಚಿರತೆಯನ್ನು ಬೆನ್ನಟ್ಟಿದ್ದು, ಗಾಬರಿಯಾದ ಚಿರತೆ ಕುರಿಯನ್ನು ಬಿಟ್ಟು ನೀರಿನ ಪೈಪಿನೊಳಗೆ ಸೇರಿಕೊಂಡಿದೆ.
ಮಾಹಿತಿ ತಿಳಿಯುತ್ತಲೇ ಸುತ್ತಮುತ್ತಲ ರೈತರು ಮತ್ತು ಕುರಿಗಾಹಿಗಳು ಸ್ಥಳದಲ್ಲಿ ಜಮಾಯಿಸಿದ್ದು, ತಕ್ಷಣವೇ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬೋನು ಸಮೇತ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದಿದ್ದಾರೆ.