ಎಗ್ ಪಫ್ ತಿನ್ನಲು ಕೋಟಿ ಕೋಟಿ ಖರ್ಚು ಮಾಡಿದ ಸರಕಾರ: ಮನ ಬಂದಂತೆ ಬಿಲ್ ಹಾಕಿ ಜೇಬಿಗಿಳಿಸಿದರೇ ಸರ್ಕಾರ ದುಡ್ಡು…??: ಜನತೆಯ ತೆರಿಗೆ ಹಣದ ದುರುಪಯೋಗ…?, ಮತ್ತೊಂದು ಹಗರಣ ಬಯಲು…?

ಸಾಂದರ್ಭಿಕ ಚಿತ್ರ

ಅಮರಾವತಿ: ಆಂಧ್ರಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಸಿಎಂ ಕಚೇರಿ ಸಿಬ್ಬಂದಿ ಅಧಿಕಾರವನ್ನು ದುರುಪಯೋಗಪಡಿಸಿ ಸರ್ಕಾರದ ಹಣವನ್ನು ಲೂಟಿ ಮಾಡಿದೆ ಎಂಬುದನ್ನ ಈಗಿನ ಎನ್‌ಡಿಎ ಸರ್ಕಾರ ಬಹಿರಂಗ ಪಡಿಸಿದೆ.

2019-2024ರ ಅವಧಿಯಲ್ಲಿ ಹೊರಡಿಸಲಾದ ಹಿಂದಿನ ಸರ್ಕಾರದ ಬಿಲ್‌ಗಳನ್ನು ಬಹಿರಂಗಪಡಿಸುವ ಮೂಲಕ ಜಗನ್ ಅವರ ಸರ್ಕಾರವು ಹೇಗೆ ಕೋಟಿಗಟ್ಟಲೆ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ತಿಳಿಸಿದೆ.

ಹಿಂದಿನ ಸರಕಾರದ ವೆಚ್ಚದಲ್ಲಿ ಕೇವಲ ಮೊಟ್ಟೆ ಪಫ್ ಗಾಗಿ ಸರ್ಕಾರ 3.62 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊಟ್ಟೆ ಪಫ್ ನೀಡಲು ಕಳೆದ 5 ವರ್ಷಗಳಲ್ಲಿ ಸರ್ಕಾರವು ವರ್ಷಕ್ಕೆ ಸರಾಸರಿ 72 ಲಕ್ಷಗಳನ್ನು ಖರ್ಚು ಮಾಡಿದೆ ಎಂಬAತಾಗಿದೆ.
ಇದರ ಲೆಕ್ಕಾಚಾರವನ್ನು ಇನ್ನಷ್ಟು ವಿವರಿಸಿದ ಎನ್‌ಡಿಎ ಸರ್ಕಾರ ಸಿಎಂಒ ಸಿಬ್ಬಂದಿ ಪ್ರತಿದಿನ 993 ಎಗ್ ಪಫ್‌ಗಳನ್ನು ತಿಂದಿ ತೇಗಿದ್ದಾರೆ. 5ವರ್ಷಗಳಲ್ಲಿ ಒಟ್ಟು 18 ಲಕ್ಷ ಎಗ್ ಪಫ್‌ಗಳನ್ನು ಜಗನ್ ಕಚೇರಿಯ ಸಿಬ್ಬಂದಿ ಸೇವಿಸಿದ್ದಾರೆ ಎಂದು ತಿಳಿಸಿದೆ.

ಈ ವಿಚಾರ ಹೊರಬೀಳುತ್ತಿದ್ದಂತೆ ರಾಜ್ಯದ ಜನತೆಗೆ ಆಘಾತವನ್ನು ಉಂಟಾಗಿದೆ. ಇದು ಜಗನ್ ಅವರ ವಿರೋಧಿಗಳಿಗೆ ಸಾಮಾಜಿಕ ಜಾಲಾತಾಣದ ವೇದಿಕೆಗಳಲ್ಲಿ ಅವರ ಪಕ್ಷವನ್ನು ಟ್ರೋಲ್ ಮಾಡಲು ಮತ್ತೊಂದು ಪ್ರಬಲ ಅಸ್ತ್ರವಾಗಿ ಹೊರಹೊಮ್ಮಿದೆ. ಜಗನ್ ಮೋಹನ್ ರೆಡ್ಡಿಯ ತನ್ನ ಐಷಾರಾಮಿ ಜೀವನಕ್ಕಾಗಿ ಸರ್ಕಾರದ ಹಣವನ್ನ ಪೋಲು ಮಾಡಿದ್ದಾರೆ. ವೈಯಕ್ತಿಕ ಭದ್ರತಾ ಸಿಬ್ಬಂದಿ ನಿಯೋಜನೆ, ರುಷಿಕೊಂಡ ಅರಮನೆಯ ನಿರ್ಮಾಣ, ವಿಶೇಷ ವಿಮಾನಗಳು ಮತ್ತು ಸಣ್ಣ ಪ್ರವಾಸಗಳಿಗೆ ಮತ್ತು ವೈಯಕ್ತಿಕ ರಜೆಗಳಿಗಾಗಿ ಚಾಪರ್‌ಗಳ ಬಳಕೆ ರೂಪದಲ್ಲಿ ಸರ್ಕಾರದ ಕೋಟ್ಯಾಂತರ ರೂಪಾಯಿಗಳನ್ನ ವ್ಯಯ ಮಾಡಿದ್ದಾರೆಂದು ಬಹಿರಂಗಪಡಿಸಲಾಗಿದೆ.

error: Content is protected !!