ಇಂದಿನಿಂದ ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನ: ಶಾಸಕರ ಹಾಜರಾತಿ ಗುರುತಿಸಲು ಎಐ ಆಧಾರಿತ ಕ್ಯಾಮರಾ ಬಳಕೆ

ಬೆಂಗಳೂರು: ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನವು ಇಂದಿನಿಂದ  ನಡೆಯಲಿದ್ದು ಶಾಸಕರ ಹಾಜರಾತಿ ಗುರುತಿಸಲು ಎಐ ಆಧಾರಿತ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸ್ಪೀಕರ್ ಯು.ಟಿ.ಖಾದರ್ “ಕಲಾಪದಲ್ಲಿ ಶಾಸಕರ ಹಾಜರಾತಿಯನ್ನು ಗುರುತಿಸಲು ಎಐ ಆಧಾರಿತ ಕ್ಯಾಮರಾ ಬಳಸಲಾಗುತ್ತಿದೆ, ಸದನಕ್ಕೆ ಯಾರು ಬೇಗ ಬರುತ್ತಾರೆ. ಕಲಾಪ ಮುಗಿಯುವ ಕೊನೆಯವರೆಗೆ ಯಾರು ಇರುತ್ತಾರೆ ಎಂಬ ಬಗ್ಗೆ ಗುರುತಿಸಲು ಎಐ ಟೆಕ್ನಾಲಜಿ ಬಳಸಲಾಗುತ್ತಿದೆ. ಶಾಸಕರು ಎಷ್ಟು ಗಂಟೆಗೆ ಬರ್ತಾರೆ, ಹೋಗ್ತಾರೆ ಎಂಬ ವಿವರಗಳನ್ನು ಎಐ ಆಧಾರಿತ ಕ್ಯಾಮರಾ ಸೆರೆ ಹಿಡಿಯಲಿದೆ” ಎಂದರು.

10 ದಿನಗಳ ಕಾಲ ಅಧಿವೇಶನ ನಡೆಯುತ್ತದೆ. ಶಾಸಕರು ಕ್ಷೇತ್ರದ ಬಗ್ಗೆ ಚರ್ಚೆ ಮಾಡಬೇಕು. ಇದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

ವಿಪಕ್ಷಗಳಿಂದ ವಿಧಾನಸೌಧಕ್ಕೆ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಇಷ್ಟು ಸಮಯ ಇತ್ತಲ್ಲಾ ಮುತ್ತಿಗೆ ಹಾಕಬೇಕಿತ್ತು, ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಅಧಿವೇಶನದಲ್ಲಿ ಸಮಯವನ್ನು ಕುಂಠಿತ ಮಾಡಬಾರದು. ಸಿಕ್ಕಿರುವ ಸಮಯವಕಾಶವನ್ನು ಕ್ಷೇತ್ರದ ಸಮಸ್ಯೆ ಮನವಿಗಳ ಬಗ್ಗೆ ಮಾತಾಡಲಿ. ಅಧಿವೇಶನದಲ್ಲಿ ಸಮಸ್ಯೆಗಳ ಚರ್ಚೆ ಆಗಬೇಕು. ಪ್ರತಿಪಕ್ಷಗಳಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ನಾನು ಅವರ ಮಿತ್ರ. ರಾಜ್ಯದ, ದೇಶದ ಹಿತಕ್ಕೋಸ್ಕರ ವಿಪಕ್ಷಗಳು ಅಧಿವೇಶನದ ಸದುಪಯೋಗ ಮಾಡಿಕೊಳ್ಳಬೇಕು, ಅಧಿವೇಶನ ಆದಮೇಲೆ ಮುತ್ತಿಗೆ ಹಾಕಬಹುದು” ಎಂದು ಮನವಿ ಮಾಡಿದರು.

 

error: Content is protected !!