ಬೆಳ್ತಂಗಡಿ: ಮೂರು ಮಾರ್ಗದ ಬಳಿಯ ಅಪಾಯಕಾರಿ ಮರ ತೆರವಿಗೆ ಕೊನೆಗೂ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೂರು ಮಾರ್ಗದ ಬಳಿ ದೊಡ್ಡ ಮರವೊಂದು ಒಣಗಿದ್ದು ಬೀಳುವ ಸ್ಥಿತಿಯಲ್ಲಿತ್ತು. ಬೆಳ್ತಂಗಡಿ ಮೂರು ಮಾರ್ಗದಿಂದ ಕೋರ್ಟ್, ತಾಲೂಕು ಕಛೇರಿ, ಪೊಲೀಸ್ ಠಾಣೆ ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನಗಳು ಸೇರಿದಂತೆ ದಿನ ನಿತ್ಯ ನೂರಾರು ಜನ ಓಡಾಡುತ್ತಿದ್ದಾರೆ.
ಬೀಳುವ ಅಪಾಯದ ಸ್ಥಿತಿಯಲ್ಲಿದ್ದ ಒಣಗಿದ ಮರದ ಕೆಳಗೆ ಕೆಲವರು ವಾಹನ ಪಾರ್ಕಿಂಗ್ ಮಾಡುತ್ತಿದ್ದರು. ಅದಲ್ಲದೇ ವಿದ್ಯುತ್ ತಂತಿಗಳು ಕೂಡ ಈ ಅಪಾಯಕಾರಿ ಮರದ ಅಡಿ ಭಾಗದಿಂದ ಹಾದು ಹೋಗಿತ್ತು. ಒಂದು ವೇಳೆ ಮರ ತುಂಡಾಗಿ ಬಿದ್ದಲ್ಲಿ ದೊಡ್ಡ ದುರಂತ ಸಂಭವಿಸಬಹುದಿತ್ತು. ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವರದಿ ಮಾಡಿತ್ತು.
ಸಧ್ಯ ಈ ವರದಿಗೆ ಅಧಿಕಾರಿಗಳ ಸ್ಪಂದನೆ ನೀಡಿದ್ದು ಅಪಾಯಕಾರಿ ಮರ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ.