‘ಪಂಚಾತಿಕೆ ಮೂಲಕ ಕುಟುಂಬ ಒಗ್ಗೂಡಿಸುತ್ತಿದ್ದ ಬಂಗೇರರು: ಬಿರುಕು ಬಿಟ್ಟ ಅನೇಕ ಕುಟುಂಬಗಳು ಅವರಿಂದ ಒಟ್ಟಾಗುತ್ತಿದ್ದವು’: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ


ಬೆಳ್ತಂಗಡಿ: ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ವಿಧಿವಶರಾಗಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದ್ದಾರೆ.

‘ಶ್ರೀ ವಸಂತ ಬಂಗೇರರವರು ಸ್ವರ್ಗಸ್ಥರಾದ ವಿಚಾರ ತಿಳಿದು ವಿಷಾದವಾಯಿತು. ಅವರು ನಮ್ಮ ತಾಲ್ಲೂಕಿನ ಶಾಸಕರಾಗಿ ಜನಸ್ನೇಹಿಯಾಗಿದ್ದರು. ಸಾಮಾನ್ಯ ಜನರೊಳಗೆ ಹಾಗೂ ಕುಟುಂಬದಲ್ಲಿ ವಿಚಾರ-ಬೇಧಗಳು ಬಂದಾಗ ನಮ್ಮ ತುಳುನಾಡಿನಲ್ಲಿ ಹೇಳುವಂತೆ ಪಂಚಾತಿಕೆ ಅಂದರೆ ಒಗ್ಗೂಡಿಸುವಿಕೆಗೆ ಪ್ರಯತ್ನ ಮಾಡುತ್ತಿದ್ದರು. ಅವರ ಈ ಹವ್ಯಾಸದಿಂದ ಅವರಿಗೆ ಎಷ್ಟೇ ಕಷ್ಟವಾದರೂ ಸಮಾಜದ ಅನೇಕ ಕುಟುಂಬಗಳನ್ನು ಒಗ್ಗೂಡಿಸಿ ಸಮಸ್ಯೆ ಪರಿಹಾರ ಮಾಡುತ್ತಿದ್ದರು. ಅವರ ಈ ಸಾಧನೆಯಿಂದಾಗಿ ಸಮಾಜದಲ್ಲಿರುವ ಬಿರುಕು ಬಿಟ್ಟ ಅನೇಕ ಕುಟುಂಬಗಳು ಒಟ್ಟಾಗುತ್ತಿದ್ದವು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ’ಎಂದು ಸಂತಾಪ ಸೂಚಿಸಿದ್ದಾರೆ

 

error: Content is protected !!