ನಾವೂರು: ಬೃಹತ್ ರಕ್ತದಾನ ಶಿಬಿರ ಯಶಸ್ವಿ ಸಂಪನ್ನ: 156 ಯುನಿಟ್ ರಕ್ತ ಸಂಗ್ರಹ

ಬೆಳ್ತಂಗಡಿ: ಸರ್ವೋದಯ ಟ್ರಸ್ಟ್(ರಿ) ನಾವೂರು , ರೋಟರಿ ಕ್ಲಬ್ ಬೆಳ್ತಂಗಡಿ, ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ(ರಿ) ಕಾರ್ಕಳ,ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ರಿ) ಬಂಗಾಡಿ,ರಕ್ತನಿಧಿ ಕೇಂದ್ರ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಮತ್ತು ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾ. 03 ರಂದು ನಾವೂರಿನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ।ಅನಂತ ಭಟ್ ಮಚ್ಚಿಮಲೆಯವರು ರೋಟರಿ ಕ್ಲಬ್ ನಡೆಸುತ್ತಿರುವ ಜನಪರ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನೇಮಿರಾಜ ಆರಿಗರವರು ಸರ್ವೋದಯ ಟ್ರಸ್ಟ್ ನ ಕಾರ್ಯಚಟುವಟಿಕೆಗಳ ಕುರಿತು ಬೆಳಕು ಚೆಲ್ಲಿದರು.


ಶಾಸಕ ಹರೀಶ್ ಪೂಂಜ ಇವರು ರಕ್ತದಾನ ಮಾಡುವುದರ ಮೂಲಕ ಯುವಕರಿಗೆ ಮಾದರಿಯಾದರು. ಹಿರಿಯರಾದ ಉಮೇಶ್ ಅತ್ಯಡ್ಕ ಇವರು ವೈದ್ಯರ ಸಲಹೆಯನ್ನು ಪಡೆದು ರಕ್ತದಾನವನ್ನು ಮಾಡಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದರು.

ಈ ಶಿಬಿರದಲ್ಲಿ 156 ಯುನಿಟ್ ರಕ್ತವು ಸಂಗ್ರಹಗೊಂಡಿದ್ದು ಸಹಕರಿಸಿದ ಎಲ್ಲಾ ದಾನಿಗಳಿಗೂ ರೋಟರಿ ಕ್ಲಬ್ ವತಿಯಿಂದ ಬಟ್ಟೆಯ ಕೈಚೀಲವನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಸಮಾಜದ ಸಂಕಲ್ಪವನ್ನು ಮಾಡಲಾಯಿತು.

ಝೋನಲ್ ಲೆಫ್ಟಿನಂಟ್ ರೊ।ಯಶವಂತ ಪಟ್ವರ್ಧನ್, ಕಾರ್ಯದರ್ಶಿಗಳಾದ ರೊ। ವಿದ್ಯಾಕುಮಾರ್ ಕಾಂಚೋಡು,
ಬಂಗಾಡಿ ಸಿ.ಎ. ಬ್ಯಾಂಕ್ ನ ಅಧ್ಯಕ್ಷರಾದ ಹರೀಶ್ ಮೊರ್ತಾಜೆ,ಸಿ.ಎ ಬ್ಯಾಂಕ್ ನಿರ್ದೇಶಕರಾದ ಎ.ಬಿ ಉಮೇಶ್ ಅತ್ಯಡ್ಕ ಹಾಗೂ ತನುಜಾ ಶೇಖರ್ ,ಕೆ.ಎಂ.ಸಿ ಆಸ್ಪತ್ರೆಯ ವೈದ್ಯರಾದ ಡಾ।ಶ್ರೀರಾಮ್,ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆಂಟನಿ ಟಿ.ಪಿ, ಲಿಲ್ಲಿ ಆಂಟನಿ, ಡಾ। ಶಿವರಾಜ ಪಜಿಲ, ಡಾ। ಕವಿತಾ ಪ್ರದೀಪ್ ,ನಾವೂರು ಪಂಚಾಯತ್ ಅಧ್ಯಕ್ಷರಾದ  ಸುನಂದ,ಉಪಾಧ್ಯಕ್ಷರಾದ  ಮಮತಾ,ಪಂಚಾಯತ್ ನ ಪೂರ್ವಾಧ್ಯಕ್ಷರಾದ ಗಣೇಶ್ ಗೌಡ,ಸದಸ್ಯರಾದ ಹಸೈನಾರ್,ಮಲವಂತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಕಾರಿಂಜ, ಮುಖ್ಯ ಶಿಕ್ಷಕಿ  ರೋಹಿಣಿ.ಕೆ.,ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರಾದ ಅಶ್ವಥ್ ಭಟ್ ಪಡ್ಪು,ಜಯಾನಂದ ಗೌಡ ಒಳಗುಡ್ಡೆ, ಅಶ್ವಥ್ ರಾಜ್ ಕಲ್ಲಾಜೆ,‌ ಉಮೇಶ್ ಪ್ರಭು ನಾವೂರು,ಪ್ರಮೋದ್ ಬೆದ್ರಬೆಟ್ಟು,ಜನಾರ್ದನ ಗೌಡ ಕಡ್ತ್ಯಾರು,ಮಹೇಶ್ ಭಟ್ ಕುದ್ಪುಲ,ಕು।ವಸಂತಿ ನಡ,ಉಮೇಶ ಮಾಲೂರು,ಪ್ರವೀಣ್ ವಿ.ಜಿ.ಕನ್ಯಾಡಿ,ಅಶೋಕ್ ಆಚಾರ್ಯ,ಪ್ರಕಾಶ್ ಇಚ್ಚಿಲ,ಅಜಿತ್ ಆರಿಗ ನಡ, ದರ್ಣಪ್ಪ ಮೂಲ್ಯ ನಾವೂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಟ್ರಸ್ಟ್ ನ ಸಂಚಾಲಕ ರೊ।ಡಾ।ಪ್ರದೀಪ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸುರೇಶ್ ಗೋಳಿದಡಿ ಕಾರ್ಯಕ್ರಮ ನಿರೂಪಿಸಿ, ನವೋದಯ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಕಾರಿಂಜ ವಂದಿಸಿದರು.

error: Content is protected !!