ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಶ್ರೀನಿವಾಸ್ ರಾವ್ ಧರ್ಮಸ್ಥಳ ಆಯ್ಕೆ:

 

ಬೆಳ್ತಂಗಡಿ:ಬಿಜೆಪಿ ಬೆಳ್ತಂಗಡಿ ಮಂಡಲ ಇದರ ಅಧ್ಯಕ್ಷರಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರಿನಿವಾಸ್ ರಾವ್ ಧರ್ಮಸ್ಥಳ ಆಯ್ಕೆಯಾಗಿದ್ದಾರೆ.
ಕಳೆದ ಹಲವಾರು ಸಮಯಗಳಿಂದ ಬಿಜೆಪಿಯ ಸಕ್ರೀಯ ಸದಸ್ಯನಾಗಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು  ನಿರ್ವಹಿಸಿ   ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಸಂಘಟನಾತ್ಮಕ ಕಾರ್ಯವೈಖರಿಯನ್ನು ಗಮನಿಸಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ಅದೇ ರೀತಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಜಯಂತ ಕೋಟ್ಯಾನ್, ಕಾರ್ಯದರ್ಶಿಗಳಾಗಿ ಸೀತಾರಾಮ ಬೆಳಾಲ್ ಇವರು ಆಯ್ಕೆಯಾಗಿದ್ದಾರೆ.

error: Content is protected !!