ಬೆಳ್ತಂಗಡಿ : ಕಳೆಂಜ ಮೀಸಲು ಅರಣ್ಯ ಪ್ರದೇಶದಲ್ಲಿ ಜಂಟಿ ಸರ್ವೆ ಪ್ರಾರಂಭ

 


ಬೆಳ್ತಂಗಡಿ : ಕಳೆಂಜ ಗ್ರಾಮದ ಅಮ್ಮಿನಡ್ಕ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದ ಜಾಗದ ತಕರಾರು ಅ.09ರಂದು ಸರ್ವೆ ಕಾರ್ಯಕ್ಕೆ ಒಪ್ಪಿಗೆ ಸೂಚಿಸುವಲ್ಲಿಗೆ ಸುಖಾಂತ್ಯ ಕಂಡಿತ್ತು. ಈ ಒಪ್ಪಂದದ ಪ್ರಕಾರ ಇಂದಿನಿಂದ (ಅ.11) ಸರ್ವೆ ಕಾರ್ಯ ಆರಂಭವಾಗಿದೆ.

ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಪವಾದಪ್ಪ ದೊಡ್ಡಮನಿ, ಗ್ರಾಮ ಆಡಳಿತ ಅಧಿಕಾರಿ ಪೃಥ್ವಿರಾಜ್ ಪಿ ಶೆಟ್ಟಿ, ಗ್ರಾಮ ಸಹಾಯಕ ಯತಿಂದ್ರ, ಭೂಮಾಪನ ಇಲಾಖೆಯ ರೇಣುಕಾ ನಾಯ್ಕ್ , ರಮೇಶ್, ಭೂಮಾಪಕ ಗುರುನಾಥ್ ಮತ್ತು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಮತ್ತು ಸಿಬ್ಬಂದಿಗಳು ಕಳೆಂಜ 309 ಸರ್ವೆ ನಂಬರಿನಲ್ಲಿ ಜಂಟಿ ಸರ್ವೆ ಆರಂಭಿಸಿದ್ದಾರೆ. ಈ ಜಾಗದ ಸರ್ವೆ ಸರಿಸುಮಾರು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಸರ್ವೆಯ ಜಾಗದ ವಿವರ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309/1 ರಲ್ಲಿ ಆಕಾರಬಂದ್ ನಂತೆ ಒಟ್ಟು ವಿಸ್ತೀರ್ಣ 8,474.50 ಎಕ್ರೆ. ಪ್ರಸ್ತುತ ಪಹಣೆಯಂತೆ ಒಟ್ಟು ವಿಸ್ತೀರ್ಣ 8,474.50 ಎಕ್ರೆ. ಸರಕಾರದ (ಕಲಂ 11 ರಲ್ಲಿ ಸುರಕ್ಷಿತ ಕಾಡು) – 7588.30.50 ಎಕ್ರೆ. ಅರಣ್ಯ ಇಲಾಖೆ(ನಿಡ್ಲೆ ಸುರಕ್ಷಿತ ವಿಸ್ತøತ ಬ್ಲಾಕು) – 335.25 ಎಕ್ರೆ . ಅರಣ್ಯ ಇಲಾಖೆ- 315.16 ಎಕ್ರೆ. ಅರಣ್ಯ ಇಲಾಖೆ( ಮಿಯಾರು ಸುರಕ್ಷಿತ ವಿಸ್ತೃತ ಬ್ಲಾಕು) – 201.15 ಎಕ್ರೆ. ಪಹಣೆಯಲ್ಲಿ ಪ್ರಸ್ತುತ ನಮೂದಿತ ಮಂಜೂರಿದಾರರ ವಿಸ್ತೀರ್ಣ – 34.63.50 ಎಕ್ರೆ ಸೇರಿ ಒಟ್ಟು 8,474.50 ಎಕ್ರೆ ಒಂಟಿ ಸರ್ವೆ ನಡೆಸಲಾಗುತ್ತದೆ.

error: Content is protected !!