ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಬಣ ಗುದ್ದಾಟಕ್ಕೆ ಕೆಪಿಸಿಸಿ ಅಸ್ತ್ರ ಪ್ರಯೋಗ..:ಬ್ಲಾಕ್ ಕಾಂಗ್ರೆಸಿನ ಇಬ್ಬರು ಮುಖ್ಯ ನಾಯಕರಿಗೆ ಗೇಟ್ ಪಾಸ್..! ಹೊಸ ನಾಯಕರ ಆಯ್ಕೆ : ಲಡಾಯಿಗೆ ಪೂರ್ಣ ವಿರಾಮ..?

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಬಣ ರಾಜಕೀಯದಲ್ಲಿ ಆಗಾಗ ನಡೆಯುತ್ತಿದ್ದ ಒಳಜಗಳ ಇತ್ತೀಚೆಗೆ ಬಹಿರಂಗವಾಗಿದ್ದು ಈ ಗಲಾಟೆ ,ಗದ್ದಲದ ವಿಚಾರ ಕೆಪಿಸಿಸಿಗೆ ತಲುಪಿತ್ತು. ಹೀಗಾಗಿ ಗಂಭೀರವಾಗಿ ಚರ್ಚೆ ನಡೆಸಿದ  ಕೆಪಿಸಿಸಿ ಇಬ್ಬರು ಮುಖ್ಯ ನಾಯಕರಿಗೆ ಗೇಟ್ ಪಾಸ್ ನೀಡಿ ಹೊಸ ನಾಯಕರನ್ನು ಆಯ್ಕೆ ಮಾಡಿದೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ರವರನ್ನು ಬದಲಾವಣೆ ಮಾಡಿ ಮಾಜಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಪೆರಾಡಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ ನೇಮಕವಾಗಿದ್ದಾರೆ. ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ರಂಜನ್ ಜಿ ಗೌಡ ಅವರನ್ನು ಬದಲಾವಣೆ ಮಾಡಿ ಲಾಯಿಲ ಸೌಹಾರ್ದ ಕೋ-ಆಪರೆವಟಿವ್ ಸೊಸೈಟಿ (ಲಿ) ಅಧ್ಯಕ್ಷರು , ಶ್ರೀ ಸ್ವಾಮಿಪ್ರಸಾದ್ ಅಸೋಸಿಯೇಟ್ಸ್ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ ಅವರನ್ನು ಕೆಪಿಸಿಸಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಬಣ ರಾಜಕೀಯಕ್ಕೆ ಪೂರ್ಣ ವಿರಾಮ ನೀಡಿದೆ.

ಶಿಸ್ತು ಸಮಿತಿಯ ಮಧ್ಯಂತರ ವರದಿ, ಚುನಾವಣಾ ಸಂದರ್ಭದಲ್ಲಿ ನಿಷ್ಕೃಯರಾದ ಬ್ಲಾಕ್ ಅಧ್ಯಕ್ಷರುಗಳು ಮತ್ತು ಇತ್ತೀಚಿನ ದಿನಗಳಲ್ಲಿ ಪಕ್ಷದ ಶಿಸ್ತು ಮರೆತು ಪಕ್ಷದ ಅಭ್ಯರ್ಥಿಯ ವಿರೋಧವಾಗಿ ಮಾಧ್ಯಮಕ್ಕೆ ಮತ್ತು ಸಭೆಯಲ್ಲಿ ನೀಡಿದ ಬಹಿರಂಗ ಹೇಳಿಕೆಗಳೇ ಈ ಬದಲಾವಣೆಗೆ ಕಾರಣವಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ನೂತನವಾಗಿ ಆಯ್ಕೆಯಾದವರು ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪುವಂತೆ ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

error: Content is protected !!