ಇತಿಹಾಸ ಪ್ರಸಿದ್ಧ ಕಾರ್ಕಳ ಮಾರಿಯಮ್ಮ ದೇವಸ್ಥಾನ: ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ₹15 ಲಕ್ಷ ದೇಣಿಗೆ:

 

 

ಬೆಳ್ತಂಗಡಿ:ವಿಜಯ ನಗರದ ಅರಸರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡಿದೆ ಎಂಬುವುದಾಗಿ ಪ್ರತೀತಿ ಇರುವ ಕಾರ್ಕಳದ ಅಧಿದೇವತೆಯಾಗಿರುವ ಎಂಟು ಮಾಗಣೆಯ ಒಡತಿ ಶ್ರೀ ಮಾರಿಯಮ್ಮ ದೇವಿಯ ಪುನಃಪ್ರತಿಷ್ಠೆ ಬ್ರಹ್ಮಕಲಶ ಮಹೋತ್ಸವವು ಹಾಗೂ ಶ್ರೀ ಮುಖ್ಯಪ್ರಾಣ ದೇವರು, ಶ್ರೀ ಉಚ್ಚಂಗಿ ಮಾರಿಯಾಮ್ಮ, ನಾಗದೇವರು ಹಾಗೂ ಪರಿವಾರ ದೈವ ದೇವರುಗಳ ಪುನಃ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವು ಸಚಿವರು ಕಾರ್ಕಳದ ಮೆಚ್ಚಿನ ಶಾಸಕರು ಮಾರಿಯಮ್ಮ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿ.ಸುನಿಲ್ ಕುಮಾರ್ ಇವರ ಸಾರಥ್ಯದಲ್ಲಿ ಮಾ 09 ರಿಂದ 14 ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಿತು.

 

    ಶ್ರೀ ಶಶಿಧರ್ ಶೆಟ್ಟಿ “ನವಶಕ್ತಿ” ಗುರುವಾಯನಕೆರೆ

 

ಈ ದೇವಸ್ಥಾನಕ್ಕೆ ಬರೋಡಾದಲ್ಲಿ  ಉದ್ಯಮಿಯಾಗಿರುವ ಬೆಳ್ತಂಗಡಿಯ ಗುರುವಾಯನಕೆರೆ ನಿವಾಸಿ ಕೊಡುಗೈ ದಾನಿ ಶಶಿಧರ್ ಶೆಟ್ಟಿ ನವಶಕ್ತಿ  ಇವರು ರೂ 15 ಲಕ್ಷ ದೇಣಿಗೆ ನೀಡಿದ್ದಾರೆ.ಈಗಾಗಲೇ ಹಲವಾರೂ ದೇವಸ್ಥಾನ, ದೈವಸ್ಥಾನ, ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ,ಬಡವರಿಗೆ, ಅನಾರೋಗ್ಯಪೀಡಿತರಿಗೆ ,  ಅರ್ಥಿಕ ಸಹಾಯ ಮಾಡುವುದರೊಂದಿಗೆ ಹಾಗೂ   ಸಾಮಾಜಿಕ, ಶೈಕ್ಷಣಿಕ  ಕ್ರೀಡಾ ಕ್ಷೇತ್ರಗಳಿಗೆ ಸಹಕಾರ ನೀಡುವ ಮೂಲಕ  ಪ್ರೋತ್ಸಾಹ  ನೀಡುತ್ತಾ ಬಂದಿದ್ದಾರೆ.   

 

 

 

ಊರವರ ಹಾಗೂ ದಾನಿಗಳ ಸಹಕಾರದಲ್ಲಿ  ಕಾರ್ಕಳದ ಮಾರಿಯಮ್ಮ ದೇವಳವು  ಅತ್ಯಾಕರ್ಷವಾಗಿ ಮೂಡಿ ಬಂದಿದ್ದು ತಾಯಿ ಮಹಮ್ಮಾಯಿ ಭಕ್ತರ ಅಭೀಷ್ಠಗಳನ್ನು ಈಡೇರಿಸುವ ಶಕ್ತಿ ದೇವತೆಯಾಗಿ ಭಕ್ತರನ್ನು ಹರಸುತಿದ್ದಾಳೆ.

ಇದನ್ನೂ ಓದಿ:

ಸರಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟ ಬರೋಡಾದ ಉದ್ಯಮಿ: ಪಿಲಿಚಂಡಿಕಲ್ಲು ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ: ಲೋಕಾರ್ಪಣೆ ಮಾಡಿದ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ತಾಯಿ ಕಾಶೀ ಶೆಟ್ಟಿ

 

error: Content is protected !!