ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ಪ್ರಕರಣ: ಸಬ್ ಇನ್ಸ್ ಪೆಕ್ಟರ್ ಸುತೇಶ್ ಸಸ್ಪೆಂಡ್..

 

 

 

ಬೆಳ್ತಂಗಡಿ :  ವಕೀಲ ಕುಲದೀಪ್ ಶೆಟ್ಟಿ  ಮೇಲೆ ಜಾಗದ ವಿಚಾರವಾಗಿ ಕಳ್ಳತನ ಆರೋಪ ಹೊರಿಸಿ ರಾತ್ರಿ ಮನೆಗೆ ನುಗ್ಗಿ ಅರೆನಗ್ನ ಸ್ಥಿತಿಯಲ್ಲಿ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ  ರಾಜ್ಯಾದ್ಯಂತ ವಕೀಲರ ಸಂಘ ಪ್ರತಿಭಟನೆ ನಡೆಸಿತ್ತು ಇದರ ಬೆನ್ನಲ್ಲೇ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಗಿದ್ದ ಸುತೇಶ್ ಅವರನ್ನು ಎಸ್.ಪಿ ಕಚೇರಿಗೆ ವರ್ಗಾವಣೆ ಆದೇಶ ಮಾಡಲಾಗಿತ್ತು. ಇದೀಗ ಐಜಿಪಿ ಅಮಾನತು ಆದೇಶ ಹೊರಡಿಸಿದ್ದಾರೆ.

ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುತೇಶ್ ಮತ್ತು ಸಿಬ್ಬಂದಿಗಳು ಜಾಗದ ವಿಚಾರವೊಂದರ ಪ್ರಕರಣದಲ್ಲಿ ಗೇಟ್ ಕಳ್ಳತನ ಆರೋಪ ಹೊರಿಸಿ ಯುವ ವಕೀಲರಾದ ಕುಲದೀಪ್ ಶೆಟ್ಟಿ ರವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಅವರ ಮೇಲೆ ಕ್ರಮಕೈಗೊಳ್ಳುವಂತೆ ವಕೀಲರ ಸಂಘದಿಂದ ಪ್ರತಿಭಟನೆ ಕೂಡ ನಡೆಸಲಾಗಿತ್ತು ಇದರಿಂದ ವರ್ಗಾವಣೆ ಮಾಡಿದ್ದರು ಆದ್ರೆ ಅಮಾನತು ಮಾಡಲು ವಕೀಲ ಸಂಘ ಪಟ್ಟು ಹಿಡಿದಿದ್ದರು ಇದೀಗ ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತರವರು ಡಿ.11 ರಂದು ಮಧ್ಯಾಹ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಎಂದು ತಿಳಿದು ಬಂದಿದೆ.

error: Content is protected !!