ಉಜಿರೆ 18 ವರ್ಷದ ಯುವತಿ ಕಾಣೆ..! ಕೆಲಸಕ್ಕೆ ಹೋದವಳು ಮನೆಗೆ ಬಾರದೆ ನಾಪತ್ತೆ..! ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

 

 

ಬೆಳ್ತಂಗಡಿ : ಉಜಿರೆ ಗ್ರಾಮದ ಮುಂಡತ್ತೋಡಿ
ಶೀನ ಎಂಬವರ ಮಗಳು ಕು.ಪ್ರಮೀಳಾ (18) ಕಾಣೆಯಾಗಿದ್ದಾರೆ. ಉಜಿರೆ ಹೆಚ್ ಪಿ ಪೆಟ್ರೋಲ್ ಪಂಪ್ ನಲ್ಲಿ ಕೆಲಕ್ಕೆಂದು ನ.21 ರಂದು ಬೆಳಿಗ್ಗೆ 07:00 ಗಂಟೆಗೆ ಮನೆಯಿಂದ ಹೊರಟವಳು ಕೆಲಸಕ್ಕೂ ಹೋಗದೆ, ಸಂಬಂಧಿಕರ ಮನೆಗೂ ತೆರಳದೆ, ಮನೆಗೂ ಬಾರದೆ ಕಾಣೆಯಾಗಿದ್ದಾಳೆ‌.

ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡ,ತುಳು ಮಾತನಾಡುವ ಈಕೆ ಆಕಾಶ ನೀಲಿ ಬಣ್ಣದ ಟಾಪ್ ಮತ್ತು ಕೆಂಪು ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿರುತ್ತಾಳೆ. ಈಕೆ ಎಲ್ಲಿಯಾದರೂ ಕಂಡುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ (08256232093) ತಿಳಿಸುವಂತೆ ಪೊಲೀಸರು ತಿಳಿಸಿದ್ದಾರೆ.

error: Content is protected !!