ಆರೋಗ್ಯ, ಮಾನಸಿಕ, ಶಾರೀರಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮಿಜಿ.

 

 

 

ಬೆಳ್ತಂಗಡಿ:ಇಂದಿನ ಆಧುನಿಕತೆಯ ಯುಗದಲ್ಲಿ ಗ್ರಾಮೀಣ ಕ್ರೀಡೆಗಳ ಕಡೆಗಣನೆ ಯನ್ನು ತಡೆಯುವಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ.ಹೆತ್ತವರು ಮಕ್ಕಳಿಗೆ ಪ್ರೋತ್ಸಾಹ ಹಾಗೂ ಸ್ಫೂರ್ತಿ ನೀಡುವ ಮೂಲಕ ಕ್ರೀಡೆಗಳ ಬಗ್ಗೆ ಆಸಕ್ತಿ ಹುಟ್ಟಿಸಬೇಕಾದುದು ಅಗತ್ಯವಾಗಿದೆ. ಕ್ರೀಡಾಸ್ಪೂರ್ತಿ ಬಾಲ್ಯದಲ್ಲೇ ಬೆಳೆಯಬೇಕು. ಆರೋಗ್ಯ,ಮಾನಸಿಕ, ಶಾರೀರಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖೆಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಬೆಳ್ತಂಗಡಿ ತಾಲೂಕು ಒಕ್ಕಲಿಗರ ಸಂಘ,ಒಕ್ಕಲಿಗ ಗೌಡರ ಯುವ ವೇದಿಕೆ, ಮಹಿಳಾ ಘಟಕ ಯುವ ವೇದಿಕೆ ಇವರ ನೇತೃತ್ವದಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಉಜಿರೆಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಜರಗಿದ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೀಡಾಕೂಟದಲ್ಲಿ ಆಶೀರ್ವಚನ ನೀಡಿದರು.

ಕ್ರೀಡಾ ಜ್ಯೋತಿ ಉದ್ಘಾಟಿಸಿ ಮಾತನಾಡಿದ ಒಕ್ಕಲಿಗ ಗೌಡರ ಸಂಘದ ಕಾರ್ಯಾಧ್ಯಕ್ಷ ಎಂ. ತುಂಗಪ್ಪ ಗೌಡ ಮಾತನಾಡಿ, ಕ್ರೀಡೆಯು ಪರಸ್ಪರ ಸಾಮರಸ್ಯ, ಬಾಂಧವ್ಯ,ಪರಿಚಯ ವೃದ್ಧಿಗೆ ಇರುವ ವ್ಯವಸ್ಥೆಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ವಹಿಸಿದ್ದು ಸಂಘದ ಚಟುವಟಿಕೆ ಮತ್ತು ಮುಂದಿನ ಗುರಿಯನ್ನು ತಿಳಿಸಿದರು.
ಸಮಾರಂಭದಲ್ಲಿ ಅತಿಥಿಯಾಗಿದ್ದ ಪತ್ರಕರ್ತ ಚೈತ್ರೇಶ್ ಇಳಂತಿಲ ಶುಭಕೋರಿದರು.
ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆ ಇದರ ಅಧ್ಯಕ್ಷ ರಂಜನ್ ಜಿ ಗೌಡ, ಮಹಿಳಾ ವೇದಿಕೆ ಅಧ್ಯಕ್ಷೆ ಅಪರ್ಣಾ ಶಿವಕಾಂತ್ ಗೌಡ,ಮಹಿಳಾ ಯುವ ವೇದಿಕೆ ಅಧ್ಯಕ್ಷೆ ಅನುಪಮಾ ಸತೀಶ್ ಗೌಡ,ಬಂಗಾಡಿ ಪ್ಯಾಕ್ಸ್ ನ ಮಾಜಿ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ, ಎಸ್.ಪಿ ಗ್ರೂಪ್ಸ್ ಮಾಲಕ ಶಿವಕಾಂತ ಗೌಡ, ಜಿ.ಪಂ ಮಾಜಿ ಸದಸ್ಯೆ ಸೌಮ್ಯಲತಾ ಜಯಂತ ಗೌಡ,‌ಧರ್ಮಸ್ಥಳ ಮಂಡಲ ಪಂಚಾಯತಿ ಮಾಜಿ ಅಧ್ಯಕ್ಷ ಸುಂದರ ಗೌಡ ಪುಡ್ಕೆತ್ತು, ನ್ಯಾಯವಾದಿ ಕೇಶವ ಗೌಡ ಪಿ ಎಲ್.ಡಿ‌ ಬ್ಯಾಂಕ್ ಉಪಾಧ್ಯಕ್ಷ ವಾಮನ ಗೌಡ, ಸಂಘದ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ,ಯುವ ವೇದಿಕೆ ಕಾರ್ಯದರ್ಶಿ ಅನಿಲ್ ಗೌಡ,ಮಹಿಳಾ ಯುವ ವೇದಿಕೆ ಕಾರ್ಯದರ್ಶಿ ದಿವ್ಯಾ ವಸಂತ ಗೌಡ, ತಾಲೂಕು ಸಂಘದ ಉಪಾಧ್ಯಕ್ಷ ಲಕ್ಷ್ಮಣ ಗೌಡ ಬೇಂಗಲ,ಶಿಶಿಲ ಗ್ರಾ.ಪಂ ಅಧ್ಯಕ್ಷ ಸಂದೀಪ್ ಗೌಡ ಅಮ್ಮುಡಂಗೆ,ಶಿಬಾಜೆ ಗ್ರಾ.ಪಂ ಅಧ್ಯಕ್ಷ ರತೀಶ್ ಗೌಡ, ಕ್ರೀಡಾ ಸಂಚಾಲಕ ಮಂಜುನಾಥ ಗೌಡ ಮುಂಡತ್ತೋಡಿ ಮೊದಲಾದವರು ಉಪಸ್ಥಿತರಿದ್ದರು.

ಯುವ ವೇದಿಕೆ ಅಧ್ಯಕ್ಷ ಸುಧಾಕರ ಗೌಡ ಸ್ವಾಗತಿಸಿ ಪ್ರಸ್ತಾವನೆಗೈದರು. ಫುಟ್‌ಬಾಲ್ ಆಟಗಾರರಾದ ಹಿಮಕರ ಗೌಡ ಕೂಡಿಗೆ ಮತ್ತು ಸೃಜನ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಕಾಲಭೈರವೇಶ್ವರ ಸೌಹಾರ್ದ ಸಹಕಾರಿ ಸಂಘದ ಲಾಭಾಂಶದಲ್ಲಿ ರೂ.50 ಸಾವಿರವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಹಸ್ತಾಂತರಿಸಲಾಯಿತು.
ಗಾಯತ್ರಿ ಪಿ.ಮತ್ತು ಪ್ರಮೋದ್ ಗೌಡ ಹಲೆಕ್ಕಿ ಕಾರ್ಯಕ್ರಮ ನಿರೂಪಿಸಿದರು ಪ್ರಕಾಶ್ ಗೌಡ ಕೆದ್ಲ ಧನ್ಯವಾದ ಸಲ್ಲಿಸಿದರು.

error: Content is protected !!