ಪ್ರಸಿದ್ಧ ಭಾಗವತ ಬಲಿಪ ಪ್ರಸಾದ್ ಭಾಗವತ ಇನ್ನಿಲ್ಲ

 

 

 

ಬೆಳ್ತಂಗಡಿ:ಯಕ್ಷಗಾನ ಲೋಕದ ಪ್ರಸಿದ್ಧ ಭಾಗವತ ಬಲಿಪ ನಾರಾಯಣ ಭಾಗವತ ಅವರ ಪುತ್ರ, ಬಲಿಪ ಪ್ರಸಾದ್ ಭಾಗವತ ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಎರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಸೋಮವಾರ ಸಂಜೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಬಲಿಪ ಶೈಲಿಯಲ್ಲಿ ಭಾಗವತಿಕೆ: ಬಲಿಪ ನಾರಾಯಣ ಭಾಗವತ ಅವರ ಯಕ್ಷಗಾನ ಭಾಗವತಿಕೆ ನಾಡಿನಾದ್ಯಂತ ಪ್ರಸಿದ್ಧಿ ಪಡೆದ ಶೈಲಿ. ಅವರ ಪುತ್ರ ಪ್ರಸಾದ್ ಭಾಗವತ ಕೂಡಾ ಅದೇ ಶೈಲಿಯಲ್ಲಿ ಹಾಡುತ್ತಿದ್ದುದು ವಿಶೇಷವಾಗಿತ್ತು. ಇದೀಗ ಪ್ರಸಾದ್ ಅವರ ಅಗಲುವಿಕೆಯಿಂದ ಭಾಗವತ ಮನೆತನದ ಕೊಂಡಿಯೊಂದು ಕಳಚಿದಂತಾಗಿದೆ.

error: Content is protected !!