ಬೆಂಕಿ ಹತ್ತಿಕೊಂಡು‌ ವಿದ್ಯುತ್ ತಂತಿ, ಗೂಡಂಗಡಿ‌ ಮೇಲೆ ಉರುಳಿ ಬಿದ್ದ ಮರ: ಬೆಳ್ತಂಗಡಿ, ಚರ್ಚ್ ರೋಡ್ ಬಳಿ ತಪ್ಪಿದ ಭಾರೀ ಅನಾಹುತ

 

ಬೆಳ್ತಂಗಡಿ: ಚರ್ಚ್ ರೋಡ್ ಸಮೀಪ ಮರವೊಂದಕ್ಕೆ ಬೆಂಕಿ ಹತ್ತಿಕೊಂಡು ಮುರಿದು ಬಿದ್ದ ಘಟನೆ ನಡೆದಿದೆ.

 

ಚರ್ಚ್ ರಸ್ತೆಯ ಸಮೀಪ ಇರುವ ದೊಡ್ಡ ಮರವೊಂದರ ಬುಡಕ್ಕೆ ಯಾರೋ ಬೆಂಕಿ ಹಾಕಿದ್ದು ಅದು ಇಡೀ ಮರಕ್ಕೆ ವ್ಯಾಪಿಸಿ ಮರ ತುಂಡಾಗಿ ಬಿದ್ದು ವಿದ್ಯುತ್ ತಂತಿ ಹಾಗೂ ಮರದ ಸಮೀಪದಲ್ಲೇ ಇದ್ದ ಗೂಡಂಗಡಿಯ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

 

ಮರದಲ್ಲಿ ಬೆಂಕಿ ಉರಿಯುತ್ತಿದ್ದು, ಸ್ಥಳೀಯರು ಅಗ್ನಿಶಾಮಕ   ಹಾಗೂ ಮೆಸ್ಕಾಂ ಇಲಾಖೆಗೆ   ಮಾಹಿತಿ ನೀಡಿದ್ದಾರೆ  ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು  ತಿಳಿದು ಬಂದಿದೆ.

error: Content is protected !!