ಯಂಗ್ ಟೈಗರ್ಸ್ ಫ್ರೆಂಡ್ಸ್ ಹಲೆಕ್ಕಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮ

 

 

ಮಡಂತ್ಯಾರ್ :ಯಂಗ್ ಟೈಗರ್ಸ್ ಫ್ರೆಂಡ್ಸ್, ಹಲೆಕ್ಕಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಜನವರಿ 9 ರಂದು ಕುಕ್ಕಳ ಬೆಟ್ಟು ಸಮೀಪದ ಹಲೆಕ್ಕಿ ಫ್ರೆಂಡ್ಸ್ ಮೈದಾನದಲ್ಲಿ ನಡೆಯಿತು.ಬೆಳಿಗ್ಗೆ ಮಹಿಳೆಯರಿಗೆ ಪುರುಷರಿಗೆ ಮತ್ತು ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಏರ್ಪಡಿಸಲಾಯಿತು.ಸಂಜೆ ನಡೆದ ಸಭಾಕಾರ್ಯಕ್ರಮಕ್ಕೆ ಯಂಗ್ ಟೈಗರ್ಸ್ ನ ಅಧ್ಯಕ್ಷರಾದ ದಿನೇಶ್ ಕುಲಾಲ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು.ಮುಖ್ಯ ಅತಿಥಿ ಗಳಾಗಿ ಮಡಂತ್ಯಾರು ಜೆಸಿಐ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ ಪದೆಂಜಿಲ, ಸ್ಥಳೀಯ ವಾರ್ಡಿನ ಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ ಪದೆಂಜಿಲ, ಉಮೇಶ್ ಸುವರ್ಣ ಹಲೆಕ್ಕಿ,ಮೆಸ್ಕಾಂ ಅಧಿಕಾರಿಯಾಗಿರುವ ನಿತಿನ್ ಕುಮಾರ್ ಕೋಟೆ, ಕಟ್ಟಡ ಗುತಿಗೆದಾರರಾಗಿರುವ ಗೋಪಾಲ್ ಮೇಸ್ತ್ರಿ ಯವರು ಉಪಸ್ಥಿರಿದ್ದು, ಸಂಸ್ಥೆಗೆ ಶುಭ ಹಾರೈಸಿದರು.ಕುಕ್ಕಳ ಬೆಟ್ಟು ಅಂಗನವಾಡಿ ಮಕ್ಕಳಿಂದ ಮತ್ತು ಸ್ಥಳೀಯ ಹಲವು ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಇತ್ತೀಚೆಗೆ ನಿಧಾನರಾದ ಹಿರಿಯ ಕಲಾಗುರು ಶ್ಯಾಮರಾಯ ಆಚಾರ್ಯ ಮತ್ತು ಹಲೆಕ್ಕಿ ಫ್ರೆಂಡ್ಸ್ ನ ಸದಸ್ಯರಾದ ಪುಷ್ಪರಾಜ ಇವರಿಗೆ ಶ್ರದಾಂಜಲಿ ಅರ್ಪಿಸಲಾಯಿತು.ಗ್ರಾಮೀಣ ಮಟ್ಟದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ ಸಹಕರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಸ್ಪರ್ಧಾಳೂಗಳಿಗೆ ಬಹುಮಾನ ವಿತರಿಸಲಾಯಿತು.ಹಲೆಕ್ಕಿ ಫ್ರೆಂಡ್ಸ್ ನ ಸದಸ್ಯ ಸಂದೇಶ್ ಧನ್ಯವಾದವಿತ್ತರು.

error: Content is protected !!