ಬೆಳ್ತಂಗಡಿ:ಮಕ್ಕಳ ದಿನಾಚರಣೆ ಪ್ರಯುಕ್ತ ನ 14 ಆದಿತ್ಯವಾರ ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಉಚಿತ ಮಕ್ಕಳ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಸಮುದಾಯ ಆರೋಗ್ಯ ತಜ್ಞೆ ಡಾ ಅನನ್ಯ ಲಕ್ಷ್ಮೀ ಸಂದೀಪ್ ತಿಳಿಸಿದರು. ಅವರು ನ 10 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾದ ಡಾ. ಸಂದೀಪ್ H S ಅವರು ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಅರೋಗ್ಯ ದೃಷ್ಟಿಯಿಂದ ಈ ಆರೋಗ್ಯ ಶಿಬಿರವನ್ನು ಬೆಳಗ್ಗೆ 10.00ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಅಯೋಜಿಸಿದ್ದಾರೆ ಅದಲ್ಲದೇ ಈ ಶಿಬಿರದಲ್ಲಿ
*ನವಜಾತ ಶಿಶುವಿನ ತಪಾಸಣೆ
* ಕೆಮ್ಮು, ಶೀತ, ಜ್ವರ, ವಾಂತಿ, ಭೇದಿ, ಹೊಟ್ಟೆನೋವು ತಪಾಸಣೆ.
* ಉಸಿರಾಟ ಸಂಬಂಧಿ ಕಾಯಿಲೆಗಳ ತಪಾಸಣೆ.
* ಅಲರ್ಜಿ ಮತ್ತು ಚರ್ಮ ರೋಗದ ತಪಾಸಣೆ.
* ಹೃದಯ, ನರ, ಕಣ್ಣು ಹಾಗೂ ಮೂತ್ರ ರೋಗ ಸಂಬಂಧಿ ಕಾಯಿಲೆಗಳ ತಪಾಸಣೆ.
* ಹದಿಹರೆಯದ ಸಮಸ್ಯೆಗಳು.
* ಮಕ್ಕಳ ಬೆಳವಣಿಗೆಯ ತಪಾಸಣೆ.
* ಉಚಿತ ಲಸಿಕೆಗಳು.
*ರಿಯಾಯಿತಿ ದರದಲ್ಲಿ ಲ್ಯಾಬೊರೇಟರಿ ಪರೀಕ್ಷೆ.
*ರಿಯಾಯಿತಿ ದರದಲ್ಲಿ ಒಳರೋಗಿ ಚಿಕಿತ್ಸಾ ಸೌಲಭ್ಯ ಗಳು ದೊರೆಯಲಿದೆ.
ಕಾರ್ಯಕ್ರಮದ ನಂತರ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಪಡೆದ 75 ವರ್ಷಗಳ ಪೂರ್ಣತೆಯನ್ನು ಸಂಭ್ರಮಿಸಲು ಮೋದಿಜಿಯವರು ಒಲಿಂಪಿಕ್ ಸಾಧಕರಿಗೆ 75 ಶಾಲಾ ಭೇಟಿ ಹಾಗು ಪೌಷ್ಟಿಕತೆಯ ಅರಿವು ಇದರ ಬಗ್ಗೆ ಜಾಗೃತಿ ಮೂಡಿಸಲು ನೀಡಿರುವ ಕರೆಯಿಂದ ಪ್ರೇರಣೆಗೊಂಡು, ಸಂತ ಜೋಸೆಫ್ ಆಸ್ಪತ್ರೆ ಕಕ್ಕಿಂಜೆ ಹಾಗೂ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ , ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಮುಂದಿನ ಆಗಸ್ಟ್ 2022 ರ ಒಳಗೆ 75 ಶಾಲೆಗಳನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಪೌಷ್ಟಿಕತೆಯ ಅರಿವು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಬಗ್ಗೆ ಯೋಜನೆ ಮಾಡಲಾಗಿದೆ .ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರು ಶ್ರೀಶ ಭಟ್ , ಸಂತ ಜೋಸೆಫ್ ಆಸ್ಪತ್ರೆಯ ಸಂದೀಪ್ ಮಕ್ಕಳ ತಜ್ಞರಾದ ಡಾ ಸಂದೀಪ್ ಹೆಚ್ ಎಸ್ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ. ಸಂದೀಪ್ ಹೆಚ್.ಎಸ್. ಮಾರ್ಕೆಂಟಿಗ್ ಕನ್ಸಲ್ಟೇಂಟ್ ಉಮೇಶ್ ಗೌಡ, ಪಿ ಆರ್ ಓ ಜೋಸ್ ಉಪಸ್ಥಿತರಿದ್ದರು.