ಅಳದಂಗಡಿ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಗಂಗಾಧರ ಮಿತ್ತಮಾರ್ ಆಯ್ಕೆ.

 

 

 

 

 

ಬೆಳ್ತಂಗಡಿ: ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ಸುಲ್ಕೇರಿ‌ಮೊಗ್ರು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ ಸೆ.13 ರಂದು ದೇವಸ್ಥಾನದ ವಠಾರದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯರಾದ ದೇವಳದ ಪ್ರಧಾನ ಅರ್ಚಕ ಎ.ಸೋಮನಾಥ ಮಯ್ಯ, ಸದಾನಂದ ಮಲೆಕುಡಿಯ, ವೈಶಾಲಿ ಸುರೇಶ ಶೆಟ್ಟಿ, ಜಯಂತಿ ಜಗನ್ನಾಥ ಶೆಟ್ಟಿ, ಡಾ.ಶಶಿಧರ ಡೋಂಗ್ರೆ, ಪಿ.ಎಚ್.ನಿತ್ಯಾನಂದ ಶೆಟ್ಟಿ, ಚಂದ್ರಶೇಖರ ಪಿ.ಕೆ., ಅನಿಲ್ ಕುಮಾರ್, ಆಡಳಿತಾಧಿಕಾರಿ ಅಳದಂಗಡಿ ಗ್ರಾಮ ಕರಣಿಕ ಜಿತೇಶ್ ಜೈನ್, ಸಹ ಅರ್ಚಕ ಪ್ರಸನ್ನ ಮಯ್ಯ ಉಪಸ್ಥಿತರಿದ್ದರು.
ದೇವಳದ ನವೀಕರಣ ನಡೆಯುತ್ತಿದ್ದು ಸರಕಾರದಿಂದ ಇನ್ನಷ್ಟು ಅನುದಾನ ದೊರಕಿಸಿಕೊಡುವಲ್ಲಿ ಹಾಗೂ ಧಾರ್ಮಿಕ ಪರಿಷತ್ತಿನ‌ ವತಿಯಿಂದ ಅನುದಾನ ನೀಡುವಲ್ಲಿ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ದೇವೇಂದ್ರ ಹೆಗ್ಡೆ ಈ ಸಂದರ್ಭ ನೀಡಿದರು.

error: Content is protected !!