ಸರ್ಕಾರದ ಸೌಲಭ್ಯ ಒದಗಿಸಲು ಶ್ರಮಿಸುತ್ತಿರುವ ಭಾರತೀಯ ಮಜ್ದೂರ್ ಸಂಘದ ಕಾರ್ಯ ಶ್ಲಾಘನೀಯ: ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ‌ ನಾಯಕ್ ಹೇಳಿಕೆ:

ಬೆಳ್ತಂಗಡಿ: ಕಾರ್ಮಿಕರು ಶ್ರಮಜೀವಿಗಳು. ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರದವರನ್ನು ಗುರುತಿಸಿ ಮಾಹಿತಿಗಳನ್ನು ನೀಡಿ ಸೌಲಭ್ಯ ಒದಗಿಸುತ್ತಿರುವ ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಕಾರ್ಮಿಕರ ಇಲಾಖೆ ಸಹಯೋಗದಲ್ಲಿ ಭಾರತೀಯ ಮಜ್ದೂರ್ ಸಂಘ ಕೊಕ್ಕಡ ಗ್ರಾಮ ಸಮಿತಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ಗುರುತು ಚೀಟಿ ರಿನೀವಲ್ ಹಾಗೂ ನೋಂದಣಿ‌, ಕಾರ್ಮಿಕರ ಸೌಲಭ್ಯಗಳ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಮಾತನಾಡಿ, ಕಾರ್ಮಿಕರು ಸರಿಯಾದ ಸಮಯದಲ್ಲಿ ತಮ್ಮ ಗುರುತು ಚೀಟಿ ರಿನೀವಲ್ ಮಾಡಿಕೊಂಡು ಸರಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿ, ಉತ್ತಮ ಸೇವೆ ನೀಡುತ್ತಿರುವ ಚಂದ್ರಶೇಖರ ಗಾಣಗಿರಿ, ಖಾಲಿದ್ ಬಿ.ವೈ ಅವರನ್ನು ಶ್ಲಾಘಿಸಿದರು.
ಎಂಡೋ ಪಿಡಿತ ಮಗುವಿಗೆ ಕೊಕ್ಕಡ ಗ್ರಾಮ ಪಂಚಾಯತ್ ವತಿಯಿಂದ ವ್ಹೀಲ್ ಚೆಯರ್ ವಿತರಿಸಲಾಯಿತು. ಸಂಘದ ವತಿಯಿಂದ ಆಯ್ದ ಫಲಾನುಭವಿಗಳಿಗೆ ವೈದ್ಯಕೀಯ ಕಿಟ್ ವಿತರಿಸಲಾಯಿತು.
ಪ್ರತಾಪ್ ಸಿಂಹ ನಾಯಕ್ ಹಾಗೂ ಜಯರಾಜ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.
ಬಿ.ಎಂ.ಎಸ್ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಅಲಂಬಿಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ‌ ಪಂಚಾಯತ್ ಉಪಾಧ್ಯಕ್ಷೆ ಪವಿತ್ರ ಕೆ., ಸೇವಾ ಸಹಕಾರಿ ಬ್ಯಾಂಕ್ ಕೊಕ್ಕಡ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಈಶ್ವರ್ ಭಟ್ ಹಿತ್ತಿಲು, ಕೊಕ್ಕಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಉಪಸ್ಥಿತರಿದ್ದರು.
ಕೇಶವ ಹಲ್ಲಿಂಗೇರಿ ನಿರೂಪಿಸಿ, ಸ್ವಾಗತಿಸಿದರು. ಗ್ರಾಮ‌ ಪಂಚಾಯತ್ ಅಧ್ಯಕ್ಷರು ಯೋಗೀಶ್ ಅಲಂಬಿಲ ವಂದಿಸಿದರು.

error: Content is protected !!