ಲಾಯಿಲ: ಭಾರೀ ಮಳೆಗೆ ಮನೆ ಪಕ್ಕದ ಗುಡ್ಡ ಕುಸಿತ: ಅಪಾಯದಲ್ಲಿ ಸ್ಥಳೀಯ ಮನೆಗಳು

ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ತಾಲೂಕಿನ ಭಾರೀ ಮಳೆಯಾಗುತಿದ್ದು ತಾಲೂಕಿನ ಹಲವೆಡೆ ಮಳೆಗೆ ಗುಡ್ಡ ಕುಸಿತ ಉಂಟಾಗುತ್ತಿದೆ. ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜಕ್ರೆಸಾಲು ಬಳಿ ಮನೆಯೊಂದರ ಬದಿಯಲ್ಲಿರುವ ಗುಡ್ಡ ಕುಸಿದಿದೆ. ‌ಸಧ್ಯ ಮನೆಗೆ ಯಾವುದೇ ಹಾನಿಯಾಗಿಲ್ಲ. ಮನೆ ಬಳಿಯ ಗುಡ್ಡದ ಮೇಲೂ ಮನೆಗಳು ಹಾಗೂ ಹತ್ತಿರದಲ್ಲೆ ಹೈಟೆನ್ಸನ್ ವಿದ್ಯುತ್ ದೊಡ್ಡ ಟವರ್ ಇದೆ.

ಮಳೆಗಾಲದ ಪ್ರಾರಂಭದಲ್ಲೇ ಈ ರೀತಿಯ ಘಟನೆ ನಡೆದಿದ್ದು, ಸ್ಥಳೀಯರಿಗೆ ಆತಂಕ ಪ್ರಾರಂಭವಾಗಿದೆ.

 

 

ಸ್ಥಳಕ್ಕೆ ಈಗಾಗಲೇ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.‌

error: Content is protected !!