ಬೆಳ್ತಂಗಡಿ: ಹಾಲಿನ ಗುಣಮಟ್ಟ ಸರಿ ಇಲ್ಲದ ಕಾರಣ ಹಾಲನ್ನು ತೆಗೆಯದೇ ಹಿಂದಿರುಗಿಸಿದ ನೆಪವಾಗಿಸಿಕೊಂಡು ಅವಾಚ್ಯವಾಗಿ ನಿಂದಿಸಿ ಮಾನಸಿಕ ಹಿಂಸೆ ನೀಡಿದ್ದಲ್ಲದೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಕಡಿರುದ್ಯಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ ಯಂ. ತಿಳಿಸಿದರು.
ಅವರು ಬೆಳ್ತಂಗಡಿ ಪತ್ರಕರ್ತ ಸಂಘದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಕಡಿರುದ್ಯಾವರ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ ಸಂಘದ ಆಡಳಿತ ಮಂಡಳಿ ನಿರ್ದೆಶನದಂತೆ ಈ ತನಕ ನನ್ನ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಬಂದಿದ್ದೇನೆ. ಸಂಘದ ಎಲ್ಲಾ ಸದಸ್ಯರಲ್ಲಿ ಹಾಗೂ ಆಡಳಿತ ಮಂಡಳಿಯಲ್ಲಿ ಉತ್ತಮ ಸಂಬಂಧವನ್ನು ಹೊಂದಿರುತ್ತೇನೆ ಅದರೆ ಸಂಘದ ನಿರ್ದೆಶಕರೊಬ್ಬರಾದ ಬರಮೇಲು ಆನಂದ ಗೌಡ ಎಂಬವರು ಇಲ್ಲ ಸಲ್ಲದ ನೆಪವೊಡ್ಡಿ ನನಗೆ ಮಾನಸಿಕ ಹಿಂಸೆ ನೀಡುತಿದ್ದಾರೆ.ಅದರೆ ಅದ್ಯಕ್ಷರು/ ಉಪಾಧ್ಯಕ್ಷರು ಹಾಗೂ ಉಳಿದ ನಿರ್ದೆಶಕರುಗಳು ನನ್ನ ಕರ್ತವ್ಯದಲ್ಲಿ ಯಾವುದೇ ಲೋಪವಿಲ್ಲದ್ದನ್ನು ಅರಿತಿರುವುದರಿಂದ ನನ್ನ ಬೆಂಬಲಕ್ಕೆ ಇದ್ದಾರೆ. ಅದಲ್ಲದೆ ನನ್ನ ಬೆಂಬಲಕ್ಕೆ ನಿಂತ ಸದಸ್ಯರುಗಳಿಗೂ ನನಗೂ ಕೆಟ್ಟ ಸಂಬಂಧಗಳನ್ನು ಈ ವ್ಯಕ್ತಿ ಕಲ್ಪಿಸುತಿದ್ದಾರೆ. ಇವರ ಮನೆಯ ಹಾಲನ್ನು ಪರೀಕ್ಷೆ ಮಾಡುವಾಗ ಗುಣಮಟ್ಟ ಇಲ್ಲದೆ ಇರುವುದರಿಂದ ಕೆ. ಎಂ. ಎಫ್ ನ ನಿರ್ದೆಶನದಂತೆ ಹಾಲನ್ನು ತೆಗೆಯದೆ ಹಿಂದೆ ಬಿಡಲಾಗಿದೆ. ಇದನ್ನೇ ನೆಪವಾಗಿಸಿಕೊಂಡು ನನಗೆ ಪೋನ್ ಮಾಡಿ ಸಂಘದ ಅಧ್ಯಕ್ಷರನ್ನೂ ಸೇರಿಸಿ ದೂರವಾಣಿಯ ಮೂಲಕ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಅದಲ್ಲದೆ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳೇ ರಾಜಿಯ ಮೂಲಕ ಇತ್ಯರ್ಥ ಪಡಿಸಿಕೊಳ್ಳಿ ಎಂಬ ಉತ್ತರವನ್ನು ನಮಗೆ ನೀಡಿದ್ದು ನಮಗೆ ನೋವನ್ನುಂಟು ಮಾಡಿದೆ ಎಂದು ಹೇಳಿದರು.
ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ
ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್. ಕೆ. ಮಾತನಾಡಿ ಸಹಕಾರ ಸಂಘಗಳ ವಿಧಿ ನಿಯಮ ಪ್ರಕಾರ ತಮ್ಮ ಕೆಲಸ ನಿರ್ವಹಿಸುತ್ತಿರುವ ವೇಳೆಯಲ್ಲಿ ಕಾರ್ಯದರ್ಶಿಯ ಕೆಲಸಕ್ಕೆ ಅಡ್ಡಿ ಪಡಿಸಿ ತಾನೊಬ್ಬ ಸದಸ್ಯರಿಗೆ ಮಾರ್ಗದರ್ಶಕನಾಗಬೇಕಿದ್ದ ಸ್ಥಾನದಲ್ಲಿದ್ದ ನಿರ್ದೆಶಕರು ತನ್ನ ಹಾಲಿನ ಗುಣಮಟ್ಟ ಸರಿ ಇಲ್ಲದನ್ನು ನೋಡಿ ಹಾಲು ಪರೀಕ್ಷಕರು ಹಿಂದೆ ಬಿಟ್ಟಿರುವ ಕಾರಣಕ್ಕೆ ಕಾರ್ಯದರ್ಶಿಯನ್ನು ಪೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಧ್ಯಕ್ಷನಾದ ನನಗೆ ಹಾಗೂ ನನ್ನ ಮನೆಯವರಿಗೆ ಅಸಭ್ಯವಾಗಿ ಬೈದು ಕ್ಷುಲ್ಲಕ ಕಾರಣಕ್ಕೆ ತಕರಾರು ಎಬ್ಬಿಸಿ ಜಾತಿ ರಾಜಕೀಯ ಹಾಗೂ ತಾನೂ ಇರುವ ಸ್ಥಾನದ ಬಗ್ಗೆಯೂ ಯೋಚಿಸದೆ ಅಧ್ಯಕ್ಷರು ಕಾರ್ಯದರ್ಶಿಗೂ ಹಾಗೂ ಹಾಲು ಪರೀಕ್ಷಕರಿಗೂ ಮತ್ತು ಅವರ ಮನೆಯವರಿಗೂ ಕೆಟ್ಟ ಶಬ್ದ ಬಳಸಿ ಬೈದಿದ್ದು ಈ ಬಗ್ಗೆ ಸ್ಥಳೀಯ ಠಾಣೆಗೆ ದಾಖಲೆ ಸಹಿತ ದೂರು ನೀಡಿದರೂ ರಾಜಕೀಯದ ಪ್ರಭಾವಕ್ಕೊಳಗಾಗಿ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಈ ಬಗ್ಗೆ ಪೊಲೀಸ್ ಇಲಾಖೆಯ ಮೇಲೆ ಸಂಶಯ ಮೂಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಮಣ್ಣ ಸುವರ್ಣ, ನಿರ್ದೆಶಕರುಗಳಾದ ರತ್ನಾಕರ ಗೌಡ, ಶ್ರೀಮತಿ ಪದ್ಮಿನಿ, ಲಲಿತ, ಗೋಪಾಲ ಗೌಡ, ನೀಲಯ್ಯ ಗೌಡ, ನಿರಂಜನ್ ಪೂಂಜ, ಅಂಗಾರ ಹೆಚ್ , ಉಪಸ್ಥಿತರಿದ್ದರು.