ಮದ್ದಡ್ಕ,ಚಾಲಕನ ನಿಯಂತ್ರಣ ತಪ್ಪಿದ ಕಾರು, ಅದೃಷ್ಟವಶಾತ್ ಪ್ರಯಾಣಿಕರು ಪಾರು:

 

 

ಬೆಳ್ತಂಗಡಿ : ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಮದ್ದಡ್ಕ ಸಮೀಪದ ನೇರಳಕಟ್ಟೆ ಎಂಬಲ್ಲಿ ಜೂ.8ರoದು ಕಾರೊಂದು ಚಾಲಕನ ನಿಯಂತ್ರ ತಪ್ಪಿ ರಸ್ತೆಯ ಡಿವೈಡರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಕಾರಿನಲ್ಲಿದ್ದ ಪ್ರಯಾಣಿಕರು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದ್ದೆ. ಕಾರು ರಸ್ತೆಯ ವಿರುದ್ದವಾಗಿ ಸಾಗಿ ಡಿವೈಡರ್ ಮತ್ತು ಮಾರ್ಗದ ಬದಿಯಲ್ಲಿ ಅಳವಡಿಸಿದ ಕಬ್ಬಿಣದ ತಡೆ ಬೇಲಿಗೆ ಡಿಕ್ಕಿ ಹೊಡೆದು ಟಯರ್ ಸ್ಪೋಟಗೊಂಡು ನಿಂತಿದೆ. ಕಾರಿನ ಎದುರು ನಜ್ಜುಗುಜ್ಜಾಗಿದೆ.ಪ್ರಯಾಣಿಕರು ಅಲ್ಪ,ಸ್ವಲ್ಪ ಗಾಯಗೊಂಡಿದ್ದಾರೆ.

error: Content is protected !!