ಗುರುಕುಲ ವಿದ್ಯಾಲಯದಲ್ಲಿ ರ‍್ಯಾಗಿಂಗ್: ಬಾಗಿಲು ಮುಚ್ಚಿ ಬಟ್ಟೆ ಬಿಚ್ಚಿ ಡ್ಯಾನ್ಸ್: ಸಹಪಾಠಿಗಳ ಅನುಚಿತ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿ

ಸಾಂದರ್ಭಿಕ ಚಿತ್ರ

ತೆಲಂಗಾಣ: ಕಾಮರೆಡ್ಡಿ ಜಿಲ್ಲೆಯ ಗುರುಕುಲ ವಿದ್ಯಾಲಯವೊಂದರಲ್ಲಿ ರ‍್ಯಾಗಿಂಗ್ ನೆಪದಲ್ಲಿ ಆರನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಬಾಗಿಲು ಮುಚ್ಚಿ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುವಂತೆ ಒತ್ತಾಸುವ ಬಗ್ಗೆ ವಿದ್ಯಾರ್ಥಿ ತನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಾನೆ.

6ನೇ ತರಗತಿಯ 15 ವಿದ್ಯಾರ್ಥಿಗಳು ಅವರದ್ದೇ ತರಗತಿಯಲ್ಲಿದ್ದ ಹುಡುಗನಿಗೆ ಮನಬಂದಂತೆ ಥಳಿಸಿದ್ದಾರೆ. ಈ ವಿದ್ಯಾರ್ಥಿಗಳು ರಾತ್ರಿ ವೇಳೆ ಕೊಠಡಿಯ ಬಾಗಿಲು ಮುಚ್ಚಿ ಬಟ್ಟೆ ಇಲ್ಲದೇ ಡ್ಯಾನ್ಸ್ ಮಾಡುತ್ತಿದ್ದು ಈ ಎಲ್ಲಾ ವಿಚಾರವನ್ನು ಬಾಲಕ ತನ್ನ ತಂದೆಯ ಬಳಿ ಹೇಳಿದ್ದಾನೆ.

“ನನ್ನನ್ನು ಬಟ್ಟೆ ಇಲ್ಲದೇ ಡ್ಯಾನ್ಸ್ ಮಾಡುವಂತೆ ಒತ್ತಾಯಿಸುತ್ತಾರೆ, ಥಳಿಸುತ್ತಾರೆ, ಚಾದರ್ ಅನ್ನು ಕಸಿದುಕೊಂಡು ನಿದ್ರೆಯಿಲ್ಲದಂತೆ ಮಾಡುತ್ತಾರೆ. ಈ ವಿಷಯಗಳನ್ನು ಯಾರಿಗಾದರೂ ಹೇಳಿದರೆ ರಾತ್ರಿ ನಿನ್ನ ಸಂಗತಿ ನೋಡಿಕೊಳ್ಳುತ್ತೇವೆ ಎಂದು ಸಹಪಾಠಿಗಳು ಬೆದರಿಕೆ ಹಾಕಿದ್ದಾರೆ. ದಸರಾ ಹಬ್ಬದ ರಜೆ ಮುಗಿಸಿಕೊಂಡು ಬಂದ ಮೇಲೆ ಮತ್ತಷ್ಟು ತೊಂದರೆ ಕೊಡುತ್ತಿದ್ದಾರೆ” ಎಂದು ಬಾಲಕ ತನ್ನ ತಂದೆ ಬಳಿ ತಿಳಿಸಿದ್ದಾನೆ.

ಈ ಬಗ್ಗೆ ಪೋಷಕರು ಪ್ರಾಂಶುಪಾಲರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸಹ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾಡಿರುವುದಾಗಿ ಪ್ರಾಂಶುಪಾಲರು ಹೇಳಿದ್ದಾರೆ.

error: Content is protected !!