ಮಧ್ಯರಾತ್ರಿ ಇಂಧನ ಟ್ಯಾಂಕರ್ ಸ್ಫೋಟ: 94 ಮಂದಿ ಸಜೀವ ದಹನ..!

ನೈಜೀರಿಯಾ: ಮಧ್ಯರಾತ್ರಿ ಸಂಭವಿಸಿದ ಇಂಧನ ಟ್ಯಾಂಕರ್ ಸ್ಫೋಟದಲ್ಲಿ 94 ಮಂದಿ ಸಾವನ್ನಪಿದ ಘಟನೆ ನೈಜೀರಿಯಾದಲ್ಲಿ ನಡೆದಿದೆ.

ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡಿದ್ದು, ಜಿಗಾವಾ ರಾಜ್ಯದಲ್ಲಿ ಮಧ್ಯರಾತ್ರಿ ಸ್ಫೋಟವಾಗಿದೆ. ಈ ವೇಳೆ ನಿವಾಸಿಗಳು ಪಲ್ಟಿಯಾದ ಟ್ಯಾಂಕರ್ ನಿಂದ ಇಂಧನವನ್ನ ತೆಗೆದುಕೊಳ್ಳುತ್ತಿದ್ದರು, ಆಗ ಭಾರಿ ಬೆಂಕಿ ಹೊತ್ತಕೊಂಡಿದ್ದು, 94 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರ ಲಾವನ್ ಆಡಮ್ ತಿಳಿಸಿದ್ದಾರೆ.

error: Content is protected !!