ಜೂಲಿಗೆ ಹೂವಿನ ಟ್ರಾಲಿಯಲ್ಲಿ ಬೀಳ್ಕೊಡುಗೆ
ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯಲ್ಲಿದ್ದ ಜೂಲಿ ನಿವೃತ್ತಿಯಾಗಿದ್ದು ವಿಶೇಷವಾಗಿ ಬೀಳ್ಕೊಡಲಾಗಿದೆ.
ಕಳೆದ 8 ವರ್ಷಗಳಿಂದ ಸಿಐಎಸ್ಎಫ್‌ನ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್‌ನ ಕೆ9 ಸ್ಕ್ವಾಡ್ ಸದಸ್ಯೆ ಲ್ಯಾಬ್ರಡಾರ್ ಶ್ವಾನ ಇಲ್ಲಿನ ವಿಮಾನ ನಿಲ್ದಾಣದ ಭದ್ರತಾ ತಂಡದಲ್ಲಿದ್ದಳು. ಇದೀಗ ನಿವೃತ್ತಿಯಾಗಿದ್ದಾಳೆ. ಆಕೆಗೆ ಹೂವಿನ ಟ್ರಾಲಿಯಲ್ಲಿ ಬೀಳ್ಕೊಡಲಾಗಿದೆ. ಈ ¸ದÀಂರ್ಭದಲ್ಲಿ ಹಿರಿಯ ಕಮಾಂಡೆAಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ಮತ್ತು ಸಿಐಎಸ್ಎಫ್‌ನ ಇತರ ಅಧಿಕಾರಿಗಳು ಜೂಲಿಯ ಅಚಲ ಸಮರ್ಪಣೆ ಮತ್ತು ನಿಷ್ಠೆ ಕೊಂಡಾಡಿದರು. ಮುಂದೆ ಕುಮಾರ ಅವರ ಆರೈಕೆಯಲ್ಲಿ ಜೂಲಿ ತನ್ನ ನಿವೃತ್ತಿ ಜೀವನವನ್ನು ಕಳೆಯಲಿದ್ದಾಳೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಿಯೊ
ಜೂಲಿ ಸ್ಥಾನಕ್ಕೆ 11 ತಿಂಗಳ ಲ್ಯಾಬ್ರಡಾರ್ ನಾಯಿ ಮರಿ ರಿಯೊವನ್ನು ಕೆ9 ತಂಡಕ್ಕೆ ಸ್ವಾಗತಿಸಲಾಗಿದೆ. “ರಿಯೊ ರಾಂಚಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶ್ವಾನ ತರಬೇತಿ ಸೌಲಭ್ಯದಲ್ಲಿ ಕಠಿಣ ತರಬೇತಿ ಪಡೆದಿದ್ದು, ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತದೆ ಮತ್ತು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಸುರಕ್ಷತೆ ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ” ಎಂದು ಜೋಶಿ ಹೇಳಿದ್ದಾರೆ.
ರಿಯೋ ನಾಯಿಮರಿಯನ್ನು ಔಪಚಾರಿಕವಾಗಿ ತಂಡಕ್ಕೆ ಸ್ವಾಗತಿಸಲು ಜೋಶಿ ಅವರು ತಮ್ಮ ಹ್ಯಾಂಡ್ಲರ್ ದಲ್ಬೀರ್ ಸಿಂಗ್ ಅವರ ಸಮ್ಮುಖದಲ್ಲಿ ರಿಯೊ ಅವರ ಕಾಲರ್‌ಗೆ ಹೊಸ ಹಗ್ಗವನ್ನು ಅಂಟಿಸಿದರು.