ಸವಣಾಲು,  ಬೋನಿಗೆ ಬಿದ್ದ ಚಿರತೆ,:ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ:

 

ಬೆಳ್ತಂಗಡಿ: ಸವಣಾಲು ಬಳಿ ಚಿರತೆಯೊಂದು ಬೋನಿಗೆ ಬಿದ್ದ ಘಟನೆ  ನಡೆದಿದೆ.
ಸವಣಾಲು ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ಚಿರತೆಯೊಂದು ಕಾಣಿಸಿದ್ದು, ಸ್ಥಳೀಯರಿಗೆ ಆತಂಕ ಎದುರಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆಯ ಬಳಿ ಎರಡು ತಿಂಗಳ ಹಿಂದೆ ಚಿರತೆ ಹಿಡಿಯಲು ಬೋನ್ ಅಳವಡಿಸಿ ಅದರಲ್ಲಿ ಕೋಳಿ ಇಡಲಾಗಿತ್ತು. ಕಳೆದ  ಮಧ್ಯರಾತ್ರಿ ಚಿರತೆ ಕೋಳಿ ಹಿಡಿಯಲು ಬೋನಿನೊಳಗೆ ಹೋಗಿ ಸೆರೆಯಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು , ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಚಿರತೆ ಸೆರೆಯಾಗಿರುವುದು  ಸ್ಥಳೀಯರ ಆತಂಕ ಕೊಂಚ ಮಟ್ಟಿಗೆ ದೂರವಾಗಿದೆ.

error: Content is protected !!