ಕಾರ್ ಖರೀದಿಸಿ ಪುಣ್ಯಕ್ಷೇತ್ರ ಭೇಟಿ ನೀಡುತ್ತಿದ್ದವರಿಗೆ ಅಪಘಾತ: ಗುಂಡ್ಯ ಬಳಿ ಕಾರಿಗೆ ಟ್ರಕ್ ಡಿಕ್ಕಿ, ಬೆಳ್ತಂಗಡಿಯ 5 ಮಂದಿಗೆ ಗಾಯ, ಮೂವರು ಗಂಭೀರ: ಮಂಗಳೂರಿನ ಖಾಸಗಿ‌ ಆಸ್ಪತ್ರೆಗೆ ದಾಖಲು:

 

 

ಕಡಬ:ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರಿನಿಂದ ಊರಿಗೆ  ಹಿಂದಿರುಗುವ ವೇಳೆ ಇಂದು ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ಇಬ್ಬರು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ನಿವಾಸಿ ಯೋಗೀಶ್ ಗೌಡ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಕಾರೊಂದನ್ನು ಖರೀದಿಸಿದ್ದು ಅದರಲ್ಲಿ ತಿರುಪತಿ ಹಾಗೂ ಇತರ ದೇವಸ್ಥಾನಕ್ಕೆ ಭೇಟಿ ನೀಡಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಕಾರಿನಲ್ಲಿ ಹರೀಶ್, ಲೋಕೇಶ್, ಯೋಗೀಶ್ ಗೌಡ, ಹಾಗೂ ಚಾಲಕನ ಪತ್ನಿ ,ಮಗಳು  ಇದ್ದರು  ಎಂದು ತಿಳಿದು ಬಂದಿದೆ. ಮೂವರನ್ನು  ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

error: Content is protected !!