ಕಲಾ ಸರಸ್ವತಿ ನೃತ್ಯ ತಂಡ ಊರ್ಲ ಪುಂಜಾಲಕಟ್ಟೆ : ಪ್ರಥಮ ವರ್ಷದ ವಾರ್ಷಿಕೋತ್ಸವ: ಊರ್ಲ ಊರಿಗೆ ನಾಮಫಲಕ ಅನಾವರಣ

ಪುಂಜಾಲಕಟ್ಟೆ: ಪುಂಜಾಲಕಟ್ಟೆಯಿಂದ ವೇಣೂರು ರಸ್ತೆಯ ಒಳಭಾಗದಲ್ಲಿರುವ ಊರ್ಲ ಊರಿಗೆ ಸಾಗುವ ರಸ್ತೆಗೆ ಅ.08ರಂದು‌ ನಾಮಫಲಕ ಅಳವಡಿಸಲಾಯಿತು.

ಕಲಾ ಸರಸ್ವತಿ ನೃತ್ಯ ತಂಡ ಊರ್ಲ ಪುಂಜಾಲಕಟ್ಟೆ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪೇರ್ಡೆ,  ಊರ್ಲ ನಯನಾಡು ರಸ್ತೆಗೆ  ನಾಮಫಲಕ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಬೆನೆಡಿಕ್ಟ ಮಿರಾಂದ, ವಸಂತ ಪೂಜಾರಿ ಹಾಗೂ ಊರಿನ ಗಣ್ಯರಾದ ಸಾಂತಪ್ಪ ಕುರಿಯೋಡಿ, ಮಚ್ಚಿನ ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿ ಉಮೇಶ್ ಕುಮಾರ್ ಪೇರ್ಡೆ, ಕಾಂತಪ್ಪ ಪೂಜಾರಿ ಕಡಲಗುರಿ, ಕಲಾಸರಸ್ವತಿ ನೃತ್ಯ ತಂಡದ ಅಧ್ಯಕ್ಷರಾದ ರಾಜೇಶ್ ದಾಸ್, ಉಪಾಧ್ಯಕ್ಷರಾದ ಶಶಿಧರ್ ಕೆ.ಊರ್ಲ, ಕಾರ್ಯದರ್ಶಿ ಸುಂದರ ಪೂಜಾರಿ ಒಳಕಾಡು, ಜೊತೆ ಕಾರ್ಯದರ್ಶಿ‌ ಮಮತ ಹೆಗ್ಡೆ , ಕೋಶಾಧಿಕಾರಿ ನಾಗೇಶ್ ಹೆಗ್ಡೆ, ಜೊತೆ ಕೋಶಾಧಿಕಾರಿ ಪ್ರಶಾಂತ್ ಕುರಿಯಾಡಿ ಸೇರಿದಂತೆ ಗ್ರಾಮಸ್ಥರು, ನೃತ್ಯ ತಂಡದ ಮಕ್ಕಳು ಉಪಸ್ಥಿತರಿದ್ದರು.

error: Content is protected !!