ಮೇಲಂತಬೆಟ್ಟು ಬೈಕ್ ಮುಖಾಮುಖಿ ಡಿಕ್ಕಿ: ನಾಲ್ವರು ಗಂಭೀರ..!

ಬೆಳ್ತಂಗಡಿ: ಮೇಲಂತಬೆಟ್ಟು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಂಭೀರ ಗಾಯಗೊಂಡ ಘಟನೆ ಆ.30 ರಂದು ಬೆಳಿಗ್ಗೆ ಸಂಭವಿಸಿದೆ.

ಬೆಳ್ತಂಗಡಿ ಪೇಟೆಯಿಂದ ಸವಣಾಲು ಕಡೆಗೆ ತೆರಳುತಿದ್ದ ಬೈಕ್ ಹಾಗೂ ಸವಣಾಲು ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು ಈ ವೇಳೆ ಒಂದು ಬೈಕ್‌ನಲ್ಲಿದ್ದ 2.5 ವರ್ಷದ ಮಗು, ಮಹಿಳೆ ಹಾಗೂ ಬೈಕ್ ಸವಾರ ಮತ್ತು ಇನ್ನೊರ್ವ ಬೈಕ್ ಸವಾರ ಸೇರಿ ನಾಲ್ವರಿಗೂ ಗಂಭೀರ ಗಾಯಗಳಾಗಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

error: Content is protected !!