ಮೈಸೂರು: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ
ಇಂದು ಬೆಳ್ಳಂ ಬೆಳಗ್ಗೆ ರಾಜ್ಯದ ಹಲವೆಡೆ ರಾಷ್ಟ್ರೀಯ ತನಿಖಾ ತಂಡ ದಾಳಿ ನಡೆಸಿದ್ದು, ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡರ ಮನೆ ಮೇಲೂ ದಾಳಿ ನಡೆಸಿದೆ.
ಕೊಲೆ ಪ್ರಕರಣ ಸಂಬಂಧ ನಾಲ್ಕು ಮಂದಿ ಆರೋಪಿಗಳೂ ತಲೆಮರೆಸಿಕೊಂಡಿದ್ದು, ಕೊಲೆಗಡುಕರ ಪತ್ತೆಗೆ ಎನ್ಐಎ ಬಲೆ ಬೀಸಿದೆ. ಈ ಮಧ್ಯೆ ಪಿಎಫ್ಐ ಸಂಘಟನೆಯ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಡಿ ಮೋಹಲ್ಲಾದಲ್ಲಿರುವ ಮಹಮದ್ ಸುಲೆಮಾನ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಸುಲೆಮಾನ್ ದೂರವಾಣಿ ಕರೆಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.