ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಬೆಳ್ಳಿಯಿಂದ ಭಾರತದ ಪದಕ ಬೇಟೆ‌ ಆರಂಭ: ‘ಮೀರಾ ಭಾಯಿ ಚಾನು’ ಸಾಧನೆಗೆ ರಾಷ್ಟ್ರದಲ್ಲಿ ಹರ್ಷ

ಟೋಕಿಯೋ: ಟೋಕಿಯೋದಲ್ಲಿ ನಡೆಯುತ್ತಿರುವ ‌ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಬೆಳ್ಳಿಯೊಂದಿಗೆ ಪದಕ ಬೇಟೆ ಆರಂಭಿಸಿದ್ದು, ದೇಶದಲ್ಲಿ ಹರ್ಷಮಯ ವಾತಾವರಣ ಮೂಡಿದೆ.


49 ಕೆ ಜಿ. ವಿಭಾಗದಲ್ಲಿ ವೈಟ್ ಲಿಫ್ಟರ್ ಮೀರಾ ಭಾಯಿ ಚಾನು ಅವರು ಬೆಳ್ಳಿ ಪದಕ ಪಡೆದಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಗಳಿಸಿದ ಮೊದಲ ಪದಕ ಎಂಬುದು ಹೆಮ್ಮೆಯ ವಿಚಾರವಾಗಿದೆ. ವೈಟ್ ಲಿಫ್ಟಿಂಗ್ ನಲ್ಲಿ ಭಾರತ ಪ್ರಥಮ ಬಾರಿಗೆ ಬೆಳ್ಳಿ ಪದಕ ‌ಪಡೆದ ಸಾಧನೆಯೂ ಚಾನು ಅವರದ್ದಾಗಿದೆ. ಈ ಹಿಂದೆ ಕರ್ಣಂ ಮಲ್ಲೇಶ್ವರಿ ಕಂಚಿನ‌ ಪದಕ‌ ಪಡೆದಿದ್ದರು. ವಿಶೇಷವೆಂದರೆ ಮೀರಾ ಅವರು ಈ ಬಾರಿ ದೇಶದಿಂದ ಆಯ್ಕೆಯಾದ ಏಕೈಕ ಮಹಿಳಾ ವೈಟ್ ಲಿಫ್ಟರ್ ಆಗಿ ಟೋಕಿಯೋಗೆ ತೆರಳಿದ್ದರು.
ಮೀರಾ ಅವರ ಸಾಧನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.‌

error: Content is protected !!